ನಮ್ಮ ನಾಡಿನ ಕರಕುಶಲ ಕಲೆಯನ್ನು ಪುಟಾಣಿಗಳಿಗೆ
ಪರಿಚಯಿಸಿದ ಚಿಣ್ಣರ ಕಲರವ

: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಬೇಸಿಗೆ ಶಿಬಿರ ಚಿಣ್ಣರ ಕಲರವ -2025 ಯಶಸ್ವೀಯಾಗಿ ಮುನ್ನಡೆಯುತ್ತಿದ್ದು, ಶಿಬಿರದ ಪ್ರಯುಕ್ತ ಚಿಣ್ಣರಿಗಾಗಿ ಪ್ರತಿದಿನ ವಿಶೇಷ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಈ ಬಾರಿ ನಮ್ಮ ನಾಡಿನ ಕರಕುಶಲ ಕಲೆಗಳಲ್ಲೊಂದಾದ ಮಣ್ಣಿನ ಮಡಕೆ ಮಾಡುವ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಈ ಮೂಲಕ ಮಣ್ಣಿನ ಮಡಕೆ ಮಾಡುವ ವಿಧಾನ ಅದರ ಉಪಯುಕ್ತತೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಬದಲಾಗುತ್ತಿರುವ ಯುಗದಲ್ಲಿ ಪುಟಾಣಿಗಳಿಗೆ ನಮ್ಮ ನಾಡಿನ ಕರಕುಶಲ ವೈವಿದ್ಯತೆಗಳಲ್ಲೊಂದಾದ ಮಣ್ಣಿನ ಮಡಿಕೆ ಮಾಡುವ ವಿಧಾನವನ್ನು ಪುಟಾಣಿಗಳಿಗೆ ಪರಿಚಯಿಸಿದ ಅತ್ಯುತ್ತಮ ವೇದಿಕೆ ಇದಾಗಿದೆ.

ನಶಿಸುತ್ತಿರುವ ಕಲೆಗಳನ್ನು ಪುಟಾಣಿಗಳಿಗೆ ಪರಿಚಯಿಸುವುದರ ಮೂಲಕ ಉಳಿಸುವ ಪ್ರಯತ್ನದತ್ತ ಪುಟ್ಟ ಹೆಜ್ಜೆಯನ್ನು ಇಡುವ ಪ್ರಯತ್ನ ಇದಾಗಿದೆ ಎಂದು ಅಂಜಲಿ ಮೊಂಟೆಸ್ಸರಿ ಸ್ಕೂಲ್ ನ ಸಂಚಾಲಕಿಯಾದ ಗೀತಾಂಜಲಿ ಟಿ ಜಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
ಇದೀಗ ಬೇಸಿಗೆ ಶಿಬಿರ 8 ದಿನಗಳನ್ನು ಪೂರೈಸಿ ಸಮಾರೋಪ ಸಮಾರಂಭಕ್ಕೆ ಸಜ್ಜಾಗಿದೆ. ನಾಲ್ಕನೇ ವರ್ಷದ ಬೇಸಿಗೆ ಶಿಬಿರ ಇಂದು ಸಂಪನ್ನಗೊಳ್ಳಲಿದೆ