ಐವರ್ನಾಡು : ದಿ.ಎನ್.ಎಂ.ಬಾಲಕೃಷ್ಣ ಗೌಡ ಅವರ ಪುತ್ಥಳಿಗೆ ಮಾಲಾರ್ಪಣೆ

0

ಐವರ್ನಾಡಿನ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದ ದಿ.ಎನ್.ಎಂ.ಬಾಲಕೃಷ್ಣ ಗೌಡ ಅವರ ಜನ್ಮದಿನಾಚರಣೆ ಪ್ರಯುಕ್ತ ಐವರ್ನಾಡಿನ ಕೇಂದ್ರ ಭಾಗದಲ್ಲಿ ನಿರ್ಮಿಸಿದ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮ ಎ.11ರಂದು ನಡೆಯಿತು.

ಪುತ್ಥಳಿ ರಚನ ಸಮಿತಿ ಅಧ್ಯಕ್ಷ ಎಸ್.ಎನ್.ಮನ್ಮಥ ಪ್ರಸ್ತಾವನೆಗೈದು, ಅಧಿಕಾರ, ಸ್ಥಾನಮಾನ ಹೊಂದಿರದಿದ್ದರೂ ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿ ಅಣ್ಣನಾಗಿ ಇಡೀ ಊರಿಗೆ ಬೆಳಕಾಗಿದ್ದ ಎನ್.ಎಂ.ಬಾಲಕೃಷ್ಣ ಗೌಡ ಅವರ ನೆನಪು ಮಾಸಿಲ್ಲ. ಅವರು ಯುವ ಸಮುದಾಯಕ್ಕೆ ಸ್ಪೂರ್ತಿಯ ಸಂಕೇತ ಎಂದರು. ಪುತ್ಥಳಿ ರಚನಾ ಸಮಿತಿ ಗೌರವಾಧ್ಯಕ್ಷೆ ಜೋತ್ಸ್ನಾ ಪಾಲೆಪ್ಪಾಡಿ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ , ಪುತ್ಥಳಿ ರಚನಾ ಸಮಿತಿ ಉಪಾಧ್ಯಕ್ಷ ಮಾಧವ ಭಟ್ ಶೃಂಗೇರಿ, ಗ್ರಾ.ಪಂ.ಮಾಜಿ ಸದಸ್ಯ ಶಾಂತರಾಮ ಕಣಿಲೆಗುಂಡಿ, ಗೋಪಾಲಕೃಷ್ಣ ಚೆಮ್ನೂರು, ಶಿವರಾಮ ನೆಕ್ರಪ್ಪಾಡಿ, ನವೀನ್ ಚಾತುಬಾಯಿ, ಚಂದ್ರಶೇಖರ ಮಡ್ತಿಲ, ಶೇಷಪ್ಪ ಉದ್ದಂಪಾಡಿ, ಮೋಹನ ಬಾರೆತ್ತಡ್ಕ, ಜೋಸ್ ಪೀಟರ್, ರಾಮಚಂದ್ರ ಗೌಡ ಪಲ್ಲತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಐವರ್ನಾಡು ಸಿ.ಎ ಬ್ಯಾಂಕ್ ಕಾರ್ಯನಿರ್ವಾಹಣಾಕಾರಿ ದೀಕ್ಷಿತ್ ಮಿತ್ತಮೂಲೆ ಕಾರ್ಯಕ್ರಮ ನಿರೂಪಿಸಿದರು.