ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇದರ 25 ನೇ ವರ್ಷದ ರಜತ ಸಂಭ್ರಮದ ಪ್ರಯುಕ್ತ ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಾಗೂ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸಮವಸ್ತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲಕೃಷ್ಣ ಸಿ.ಎಚ್, ಹಿರಿಯರಾದ ಮಾಧವ ಭಟ್ ಶೃಂಗೇರಿ,ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೀನಪ್ಪ ಗೌಡ ನಿಡ್ಡಾಜೆ, ಜ್ಯೋತ್ಸ್ನಾ ಪಾಲೆಪ್ಪಾಡಿ, ವಾಸುದೇವ ನಿಡುಬೆ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್ ಉಪಸ್ಥಿತರಿದ್ದರು.
ನವೋದಯ ಪ್ರೇರಕ ಪ್ರಕಾಶ್ ಜಬಳೆ ಸ್ವಾಗತಿಸಿದರು