ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿಚೆನ್ನಯ ಆದಿಬೈದೇರುಗಳ ದೈವಸ್ಥಾನದಲ್ಲಿ ನೇಮೋತ್ಸವ ನಡೆಯಿತು.

ನಿನ್ನೆ ಬೆಳಿಗ್ಗೆ ನಾಗತಂಬಿಲ, ಮುಹೂರ್ತ ತೋರಣ, ಮಧ್ಯಾಹ್ನ ಕಟ್ಟಬೀಡಿನಿಂದ ಪೂರ್ವಸಂಪ್ರದಾಯದಂತೆ ಭಂಡಾರ ಹೊರಡುವುದು, ನೇತ್ರಾದಿ ಗರಡಿಯಲ್ಲಿ ದರ್ಶನ, ರಾತ್ರಿ ಬೈದೇರುಗಳು ಗರಡಿ ಇಳಿಯುವುದು, ರಾತ್ರಿ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ, ಇಂದು ಪ್ರಾತಃಕಾಲ ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸುವುದು, ಇಂದು ಬೆಳಿಗ್ಗೆ ಕೋಟಿಚೆನ್ನಯ್ಯರ ದರ್ಶನ ರಂಗಸ್ಥಳದಲ್ಲಿ, ಬೈದೇರುಗಳ ಸೇಟು, ಬೈದೆರುಗಳಲ್ಲಿ ಅರಿಕೆ, ಗಂಧಪ್ರಸಾದ ಮತ್ತು ತುಲಾಭಾರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಗರಡಿಯ ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು ಸೇರಿದಂತೆ ಊರ ಹಾಗೂ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.
ನಿನ್ನೆ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯರವರನ್ನು ರಾಮಕೃಷ್ಣ ಶೆಟ್ಟಿ ಕಟ್ಟಬೀಡುರವರು ಸನ್ಮಾನಿಸಿದರು.
