
ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನದಲ್ಲಿ ಜಾತ್ರೋತ್ಸವವು ಆರಂಭಗೊಂಡಿದ್ದು, ಇಂದು ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆಗೊಂಡಿತು.

ಅವಭೃತ ಸ್ನಾನದ ಜಳಕದ ಗುಂಡಿ ಬಳಿಯಿಂದ ದೇವಸ್ಥಾನದವರೆಗೆ ಸೀಮೆಯ ವಿವಿಧ ಗ್ರಾಮಗಳ ಭಕ್ತರಿಂದ ಹಸಿರುವಾಣಿಯು ಮೆರವಣಿಗೆ ಕುಣಿತ ಭಜನೆ ಸಿಂಗಾರಿ ಮೇಳದ ಮೆರುಗಿನೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ಊರ , ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು.


