ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆವಿಜಿಸಿಇ ಹ್ಯಾಕ್ ವೈಸ್ ಬ್ಯಾನರ್ ಬಿಡುಗಡೆ

0

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಹ್ಯಾಕಥಾನ್ ಕಾರ್ಯಕ್ರಮ ಕೆವಿಜಿಸಿಇ ಹ್ಯಾಕ್‌ವೈಸ್ ಅನ್ನು ಅಧಿಕೃತವಾಗಿ ಪ್ರಾರಂಭಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿ ಕ್ಲಬ್ ಸ್ಪಿಯರ್ ಹೈವ್, ಬ್ಯಾನರ್ ಬಿಡುಗಡೆ ಸಮಾರಂಭವನ್ನು ದಿನಾಂಕ: ೧೨-೦೪-೨೦೨೫ ರಂದು ಯಶಸ್ವಿಯಾಗಿ ಆಯೋಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯರು
ಡಾ. ಸುರೇಶ ವಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಆವಿಷ್ಕಾರ ಶಕ್ತಿಯ ಪ್ರಾಮುಖ್ಯತೆಯ ಕುರಿತು ಪ್ರೇರಣಾದಾಯಕ ಭಾಷಣವನ್ನು ನೀಡಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ
ಡಾ. ಉಜ್ವಲ್ ಯು.ಜೆ. ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಬಗ್ಗೆ ಪ್ರಾಂಶುಪಾಲರು ಈ ಸಂದರ್ಭದಲ್ಲಿ ಮಾಹಿತಿಯನ್ನು ಹಂಚಿಕೊಂಡರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ್ ಎ ಅವರು ಐಐಸಿ ಸಂಯೋಜಕರು ಮತ್ತು ಕನ್ವೀನರ್ ಆಗಿ ತಮ್ಮ ಸತತ ಬೆಂಬಲ ಹಾಗೂ ಯೋಜನೆಯ ಯಶಸ್ವಿಗಾಗಿ ನೀಡಿದ ದುಡಿಮೆಗೆ ವಿಶೇಷ ಪ್ರಸಂಸೆ ವ್ಯಕ್ತವಾಯಿತು. ಇವರ ಜೊತೆಗೆ, ಮಾರ್ಗದರ್ಶಕರಾದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಕಿಶೋರ್ ಕುಮಾರ್ ಕೆ. ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ. ಹಾಗೂ ವಿವಿಧ ವಿಭಾಗದ ಪ್ರಾಧ್ಯಾಪಕರು, ಬೋಧಕ, ಬೋಧಕೇತರ ವರ್ಗದ ಸದಸ್ಯರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಉಪಸ್ಥಿತಿಯಿಂದ ಈ ಸಮಾರಂಭಕ್ಕೆ ಇನ್ನಷ್ಟು ಪ್ರಾಮುಖ್ಯತೆ ಮತ್ತು ವೈಭವ ಹೆಚ್ಚಿತು. ಬ್ಯಾನರ್ ಅನಾವರಣದ ಕ್ಷಣವು ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿತು. ಇದು ಹ್ಯಾಕ್‌ವೈಸ್‌ನ ಅಧಿಕೃತ ಆರಂಭವನ್ನೇ ಸೂಚಿಸಿತು. ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣರಾಗಿರುವ ಸಂಘಟನಾ ಸಮಿತಿಯ ಸದಸ್ಯರ ಶ್ರಮ, ನಿಷ್ಠೆ ಮತ್ತು ಪ್ರೀತಿ ಶ್ಲಾಘನೀಯವಾಗಿದೆ. ಈ ಮೂಲಕ ಕೆವಿಜಿಸಿಇ ಹ್ಯಾಕ್‌ವೈಸ್ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಿಗೆ ನವೀನತೆ ಹಾಗೂ ಸಹಕಾರದ ವೇದಿಕೆಯನ್ನು ಕಲ್ಪಿಸುತ್ತಿದೆ.