ರಸ್ತೆ ವ್ಯವಸ್ಥೆ ಇಲ್ಲದೆ ಹಿಂತಿರುಗಿದ
ಅಗ್ನಿ ಶಾಮಕ ವಾಹನ

ಪೆರಾಜೆಯ ಮಜಿಕೋಡಿ ಎಂಬಲ್ಲಿ ನಿನ್ನೆ ಸಂಜೆ ಮರಕ್ಕೆ ಸಿಡಿಲು ಬಡಿದ ಘಟನೆ ವರದಿಯಾಗಿದ್ದು ಎ. 14 ಸಂಜೆ ಅದೇ ಮರದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಮರದಲ್ಲಿ ಬೆಂಕಿ ಕಂಡ ಸ್ಥಳೀಯರು ಸುಳ್ಯ ಅಗ್ನಿ ಶಾಮಕ ದಳದವರಿಗೆ ವಿಷಯ ತಿಳಿಸಿದ ಮೇರೆಗೆ ಅಗ್ನಿ ಶಾಮಕ ದಳದ ವಾಹನ ಆಗಮಿಸಿತು.
ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಅಗ್ನಿ ಶಾಮಕ ದಳದ ವಾಹನ ಹೋಗಲು ಸಾಧ್ಯವಾಗದಿರುವುದರಿಂದ ಮತ್ತೆ ಹಿಂತಿರುಗಬೇಕಾಯಿತು. ಇದೀಗ ಮರದ ಮೇಲ್ಭಾಗದಲ್ಲಿ ಬೆಂಕಿ ಉರಿಯುತ್ತಿದ್ದು
ಬೆಂಕಿಯ ಕಿಚ್ಚು ಕಾಡಿಗೆ ಹತ್ತಿಕೊಳ್ಳದಂತೆ ಸ್ಥಳೀಯ ನಿವಾಸಿಗಳು ಎಚ್ಚರ ವಹಿಸಬೇಕಾಗಿದೆ.
