ಭಾರತೀಯ ಜನತಾ ಪಾರ್ಟಿ ಪಂಜ ಐವತ್ತೊಕ್ಲು , ಕೂತ್ಕುಂಜ ಶಕ್ತಿ ಕೇಂದ್ರ ಕಾರ್ಯಕರ್ತ ಸಮಾಲೋಚನೆ ಸಭೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ
ಭೇಟಿ ಕಾರ್ಯಕ್ರಮ ಎ.15 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರನ್ನು ಪಕ್ಷದ ಪ್ರಮುಖರಾದ ಡಾ.ರಾಮಯ್ಯ ಭಟ್ ರವರು ಶಾಲು ಹಾಕಿ ಗೌರವಿಸಿದರು.

ಬಳಿಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಮಾತನಾಡಿ ” ಈ ಭಾಗದಲ್ಲಿ ಅಡಿಕೆ
ಮರಗಳಿಗೆ ಹಳದಿ ರೋಗ, ಎಲೆ ಚುಕ್ಕಿ ರೋಗ ಸಮಸ್ಯೆಗಳು ಇದ್ದು , ಈ ಸಮಸ್ಯೆಗಳ ಬಗೆ ಹರಿಸಲು ಸಂಶೋಧನೆ ನಡೆಯುತ್ತಿರಲಿ. ಜೊತೆಗೆ ಕೃಷಿಕರು ಕಾಫಿ ಅಥವಾ ಇತರ ಬೆಳೆಗಳ ಬಗ್ಗೆಯೂ ಗಮನಹರಿಸಬೇಕು”. ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಕೆಲವು ಯೋಜನೆಗಳಿಗೆ
ರಾಜ್ಯ ಸರ್ಕಾರದ ಪಾಲು ಇರುತ್ತದೆ. ರಾಜ್ಯ ಸರ್ಕಾರ ಸ್ಪಂಧಿಸದ ಕಾರಣ. ಯೋಜನೆಗಳು ಅನುಷ್ಠಾನ ಆಗುತ್ತಿಲ್ಲ.
ಮುಂದಿನ ಎಲ್ಲಾ ಚುನಾವಣೆಗಳು ಸಂಘಟಿತರಾಗಿ ಗೆಲುವು ಸಾಧಿಸುವ. ಪಕ್ಷ
ಸಂಘಟನೆ ಜೊತೆಗೆ ಅಭಿವೃದ್ಧಿ ಪಡಿಸುವ ಎಂದು ಅವರು ಹೇಳಿದರು.
ಶಾಸಕಿ ಕು.ಭಾಗೀರಥಿ ಮುರುಳ್ಯ, ಭಾಜಪಾ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪೂರ್ವಾಧ್ಯಕ್ಷ ಹರೀಶ್ ಕಂಜಿಪಿಲಿ,ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ಹಿರಿಯ ವೈದ್ಯರು ಡಾ.ರಾಮಯ್ಯ ಭಟ್, ಅನೂಪ್ ಬಿಳಿಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ “ಕರಿಕ್ಕಳದಿಂದ ಕಂಬಳ ಮೂಲಕ ಪೊಳೆಂಜಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸಲು, ಪಂಜ -ಬಳ್ಳಕ ಗುತ್ತಿಗಾರು ರಸ್ತೆ ಅಭಿವೃದ್ಧಿ ಪಡಿಸಲು, ಶೂನ್ಯ ಬಡ್ಡಿಯ ಬೆಳೆ ಸಾಲದ ಮಿತಿ 5 ಲಕ್ಷಕ್ಕೆ ಏರಿಸಲು, ಬಿಎಸ್ ಎನ್ ಎಲ್ ಟವರ್ ಸಮಸ್ಯೆ ಸರಿ ಪಡಿಸಲು, ಕೊರಗ ಜನಾಂಗದ ಮನೆಗಳ ಅಭಿವೃದ್ಧಿ ಪಡಿಸುವಂತೆ” ಮನವಿ ನೀಡಿದರು.
“ಕಲ್ಮಕಾರು ಕಡುಮಕಲ್ಲು ಮೂಲಕ ಕೊಡಗು ಜಿಲ್ಲೆಗೆ ಸಂಪರ್ಕ ರಸ್ತೆಯಾದರೆ. ಘಾಟಿ ಮೂಲಕ ಹೋಗುವ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ”. ಎಂದು ಶಿವರಾಮಯ್ಯ ಕರ್ಮಾಜೆ ಹೇಳಿದರು.
ಬಹು ಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ರಸ್ತೆ ಬದಿಯಲ್ಲಿ ಹೊಂಡ ತೋಡಿ ಕೆಲವು ಕಡೆ ಸರಿಯಾಗಿ ಮುಚ್ಚಿಲ್ಲ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುವರ್ಣಿನಿ ಎನ್ ಎಸ್ ಹೇಳಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು.ಜಯರಾಮ ಕಲ್ಲಾಜೆ ನಿರೂಪಿಸಿದರು. ಶರತ್ ಕುದ್ವ ವಂದಿಸಿದರು.