ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರ ದಿಂದ ನೇಮಕಗೊಂಡ ಕೆ. ಎಂ. ಮುಸ್ತಫ ರವರನ್ನು 37 ವರ್ಷ ಗಳ ಹಿಂದೆ ಮಂಗಳೂರು ಪಾಲಿಟೆಕ್ನಿಕ್ ನಲ್ಲಿ ವ್ಯಾಸoಗ ಮಾಡುತ್ತಿರುವ ಸಂದರ್ಭದಲ್ಲಿ ಸಹಪಾಠಿ ಗಳಾಗಿದ್ದ ಸ್ನೇಹಿತರು ಮುಸ್ತಫ ರವರಿಗೆ ಹುದ್ದೆ ಸಿಕ್ಕಿದ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ ಅವರು ಇಂದು ಮಂಗಳೂರಿನಲ್ಲಿ ಇಂಜಿನಿಯರ್ ಗಳಾಗಿ, ಆರ್ಕಿಟೆಕ್ಟ್ ಗಳಾಗಿ ಸ್ವಂತ ಉದ್ಯೋಗ ವನ್ನು ಮಾಡಿ ಕೊಂಡು ಬರುತ್ತಿದ್ದು, ಸುಳ್ಯಕ್ಕೆ ಬಂದು ಸೂಡ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ಮಂಗಳೂರು ಇಂಜಿನಿಯರ್ಸ್ ಅಸೋಸಿಯೇಷನ್ ಪೂರ್ವಧ್ಯಕ್ಷ ಲಯನ್ ಬಾಲಸುಬ್ರಹ್ಮಣ್ಯ,ಹೈ ಟೆಕ್ ಕನ್ಸಲಟ್ನೆಸಿ ಮಹಮ್ಮದ್ ಅಯ್ಯುಬ್ ಖಾದರ್, ಬಿಲ್ದರ್ಸ್ ಸಂಸ್ಥೆ ಕ್ರಡೈ ನಿರ್ದೇಶಕ ಲ| ಶೈಲೇಶ್, ಇಂಜಿನಿಯರ್ಸ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಅರುಣ್ ರಾಜ್, ರೋ| ಇಂಜಿನಿಯರ್ ಹೇಮಂತ್ ಈ ಸಂದರ್ಭದಲ್ಲಿ ಮುಸ್ತಫ ರವರನ್ನು ಸನ್ಮಾನಿಸಿದರು
ವಿಷಯ ಪ್ರಸ್ತಾವನೆ ಮಾಡಿದ ಬಾಲ ಸುಬ್ರಮಣ್ಯ ನಮ್ಮ ಸ್ನೇಹಾಚಾರ, ಧರ್ಮ, ಜಾತಿಯನ್ನು ಮೀರಿದ ಭಾoದವ್ಯ ಆದ್ದರಿಂದ ಸುಧೀರ್ಘ ಕಾಲ ಅಚ್ಚಳಿಯದೆ ಉಳಿಸಲು ಸಾಧ್ಯವಾಗಿದೆ
ಮುಸ್ತಫ ರಂತಹ ಸೇವಾ ಮನೋಭಾವದ ವ್ಯಕ್ತಿಗಳು ಇಂದಿನ ಸಮಾಜದಲ್ಲಿ ಅವಶ್ಯಕ ಎಂದರು
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶದ್ದೀನ್, ಆರಂಬೂರು ಜುಮಾ ಮಸ್ಜಿದ್ ಅಧ್ಯಕ್ಷ ಬಾಷಾ ಸಾಹೇಬ್ ಎಸ್ಎಎಸ್, ಉದ್ಯಮಿ ಬಿ. ಇಬ್ರಾಹಿಂ, ಕಾಂಟ್ರಾಕ್ಟರ್ ಎಂ. ಕೆ. ಅಬ್ದುಲ್ ಲತೀಫ್, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಬಶೀರ್ ಸಪ್ನಾ, ಮೊದಲಾದವರು ಉಪಸ್ಥಿತರಿದ್ದರು