ಬೂಡು ಶ್ರೀ ಭಗವತಿ ಕ್ಷೇತ್ರದ ಮಹಾದ್ವಾರದ ಬಳಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಇಂದುಹಮ್ಮಿಕೊಳ್ಳಲಾಯಿತು.
ನಿನ್ನೆ ಸುರಿದ ಗಾಳಿ ಮಳೆಗೆ ದ್ವಾರದ ಬಳಿಯಲ್ಲಿ ಮರವೊಂದು ಧರೆಗುರುಳಿದ ಪರಿಣಾಮವಾಗಿ ಮರದ ಕೊಂಬೆಗಳು ಮತ್ತು ಕಸ ಕಡ್ಡಿಗಳು ರಸ್ತೆಯಲ್ಲಿ ಆವರಿಸಿಕೊಂಡಿತ್ತು. ಸ್ಥಳೀಯ ಭಗವತಿ ಯುವ ಸೇವಾ ಸಂಘದ ಸದಸ್ಯರು ಸೇರಿಕೊಂಡು ಬೂಡು ರಾಧಾಕೃಷ್ಣ ರೈ ಯವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡರು. ಸ್ಥಳೀಯರು ಯುವಕರು ಮಹಿಳೆಯರು ಸಹಕರಿಸಿದರು.