ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಆಜಾದೀ ಕಾ ಅಮೃತ್ ಮಹೋತ್ಸವ್

0

75ನೇ ಸ್ವಾತಂತ್ರ್ಯೋತ್ಸವವನ್ನು ಸರಕಾರೀ ಪ್ರೌಡಶಾಲೆ ಎಲಿಮಲೆಯಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಪೂರ್ವಾಹ್ನ 9 ಗಂಟೆಗೆ ಸರಿಯಾಗಿ ಎಸ್. ಡಿ. ಎಂ. ಸಿ. ಕಾರ್ಯಾಧ್ಯಕ್ಷರಾದ ಶ್ರೀಯುತ ಜಯಂತ ಹರ್ಲಡ್ಕರವರು ಧ್ವಜಾರೋಹಣವನ್ನು ನೆರವೇರಿಸಿದರು. ಶಾಲಾ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿಯವರು ಸಹಕರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ಜಯಂತ ಹರ್ಲಡ್ಕರವರು ಕೇಂದ್ರ ಸರ್ಕಾರದ ನೂತನ ಯೋಜನೆ ಘರ್ ಘರ್ ತಿರಂಗಾದ ಬಗೆಗೆ ಮಾಹಿತಿ ನೀಡಿ ತಿರಂಗಾ ಸುರಕ್ಷತೆಯ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ವಸಂತರು ಸ್ವಾತಂತ್ರ್ಯದ ಮಹತ್ವವನ್ನು ಪುಟ್ಟಕಥೆಯೊಂದಿಗೆ ವಿವರಿಸಿ ನಮ್ಮಹಿರಿಯರು ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕೆಂಬ ಕಿವಿಮಾತು ಹೇಳುವುದರ ಜೊತೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಪ್ರೇರಣೆ ತುಂಬುವ ಹಾಡನ್ನು ಹಾಡಿಸಿದರು. ಮುಖ್ಯ ಶಿಕ್ಷಕರಾದ ಶ್ರೀಮತಿ ಸಂಧ್ಯಾ ಕುಮಾರ್ ಅವರು ಸ್ವಾಗತಿಸಿ, ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ರಾಜೇಶ್ವರಿ ಎಂ. ಟಿ ವಂದಿಸಿದರು.
ಗಣಿತ ಶಿಕ್ಷಕರಾದ  ಮುರಳೀಧರ ಪುನ್ನುಕುಟ್ಟಿ ನಿರೂಪಿಸಿದರು. ಹಿಂದಿ ಶಿಕ್ಷಕರಾದ ವಿರೂಪಾಕ್ಷ, ಕನ್ನಡ ಶಿಕ್ಷಕಿ ಕುಮಾರಿ ಸಂಗೀತಾ ಹಾಗೂ ವಿಜೇತ್ ಅವರು ಸಹಕರಿಸಿದರು.
ವಿದ್ಯಾರ್ಥಿ ಗಳು ದೇಶಭಕ್ತಿಯ ಸುಂದರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಿಹಿಯೂಟದೊಂದಿಗೆ ಸುಂದರವಾಗಿ ಕಾರ್ಯಕ್ರಮ ಸಂಪನ್ನಗೊಂಡಿತು.