ಕನಕಮಜಲು: ಮುಗೇರು- ಮಾಣಿಮಜಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

 

ದತ್ತಿನಿಧಿ ವಿತರಣೆ, ನಿವೃತ್ತ ಶಿಕ್ಷಕರು ಹಾಗೂ ನಿವೃತ್ತ ಯೋಧರಿಗೆ ಸನ್ಮಾನ

ಕನಕಮಜಲು ಗ್ರಾಮದ ಮುಗೇರು ಮಾಣಿಮಜಲು ಕಿ‌.ಪ್ರಾ. ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ, ನಿವೃತ್ತ ಯೋಧರಿಗೆ ಗೌರವಾರ್ಪಣೆ ಮತ್ತು ಸಾರ್ವಜನಿಕ ಬಾವಿ ಲೋಕಾರ್ಪಣೆ ಕಾರ್ಯಕ್ರಮವು ಆ.15ರಂದು ನಡೆಯಿತು.

 

ನಿವೃತ್ತ ಯೋಧ ಭಾಸ್ಕರ ಕಾರಿಂಜರವರು ಧ್ವಜಾರೋಹಣ ನೆರವೇರಿಸಿದರು. ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಕುತ್ಯಾಳ ಸಭಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಭಾಸ್ಕರ ಕಾರಿಂಜರವರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿಯರಾದ ಶ್ರೀಮತಿ ಪದ್ಮಾವತಿ ಬುಡ್ಲೆಗುತ್ತು ಹಾಗೂ ಶ್ರೀಮತಿ ಪುಷ್ಪಾವತಿ ದೇವರಗುಂಡ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕನಕಮಜಲು ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯ ಅನುದಾನ ಹಾಗೂ ಗ್ರಾಮಸ್ಥರ ದೇಣಿಗೆಯಿಂದ ನಿರ್ಮಿಸಲಾದ ಸಾರ್ವಜನಿಕ ಬಾವಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ದಿ. ಹೊನ್ನಪ್ಪ ಗೌಡ ಕೊಂರ್ಬಡ್ಕ ಇವರ ಹೆಸರಲ್ಲಿ ಶ್ರೀಮತಿ ಕಮಲ ಕೊಂರ್ಬಡ್ಕ ಅವರು ಸ್ಥಾಪಿಸಿದ ಧತ್ತಿನಿಧಿ ವಿತರಣೆ ಹಾಗೂ ಯುವಕ ಮಂಡಲ ಪ್ರಾಯೋಜಿಸಿರುವ ಮಕ್ಕಳ ಸ್ಪರ್ಧಾ ಬಹುಮಾನ ವಿತರಣೆ ,ಇಲಾಖಾ ವತಿಯ ಸ್ಪರ್ಧಾ ಬಹುಮಾನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕರುಗಳಾದ ಆನಂದ ಮಾಸ್ಟರ್ ಅಕ್ಕಿಮಲೆ, ನಾಗಪ್ಪ ಮಾಸ್ಟರ್ ಬೊಮ್ಮಟ್ಟಿ ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ, ಕನಕಮಜಲು ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮಟ್ಟಿ, ಪಂಚಾಯತ್ ಕಾರ್ಯದರ್ಶಿ ರಮೇಶ್ ಟಿ, ಆರ್ಟ್ ಆಫ್ ಲಿವಿಂಗ್ ನ ರಾಮಕೃಷ್ಣ ಭಟ್,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ವಸಂತ ಗಬ್ಬಲಡ್ಕ, ಗೋಪಾಲಕೃಷ್ಣ ಕುತ್ಯಾಳ, ಯುವಕ ಮಂಡಲದ ಕಾರ್ಯದರ್ಶಿ, ಹರ್ಷಿತ್ ಉಗ್ಗಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಪ್ಪ ನಾಯ್ಕ ದೇರ್ಕಜೆ ಸರ್ವರನ್ನು ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದಿಸಿದರು, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಈಶ್ವರ ಕೊಂರ್ಬಡ್ಕ ಕಾರ್ಯಕ್ರಮ ನಿರೂಪಿಸಿದರು.
ಅತಿಥಿ ಶಿಕ್ಷಕಿಯಾದ ಶ್ರೀಮತಿ ನಿರ್ಮಲ ಹಾಗೂ ಗೌರವ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಕುತ್ಯಾಳ, ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಎಸ್ ಡಿ ಎಂ ಸಿ ಸದಸ್ಯರುಗಳಾದ ದಿವಾಕರ ಕಾಳಪ್ಪಜ್ಜನ ಮನೆ,ಭಾಸ್ಕರ ಉಗ್ಗಮೂಲೆ, ಜಗದೀಶ ದೇರ್ಕಜೆ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪುಷ್ಪವತಿ ಕೊಲ್ಲಂತಡ್ಕ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಪುರುಷೋತ್ತಮ ಕಲ್ಲಾಜೆ ಕುತ್ಯಾಳ ಮೊದಲಾದವರು ಸಹಕರಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸುಮಾರು ಇನ್ನೂರಕ್ಕೂ ಅಧಿಕ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.