ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಅಧ್ಯಕ್ಷೆ- ಯಶೋಧ ಕೆ, ಕಾರ್ಯದರ್ಶಿ-ಜಲಜಾಕ್ಷಿ,ಖಜಾಂಜಿ- ಬೇಬಿ ಆಲೆಟ್ಟಿ

ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ.4 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಮಹಿಳಾ ಮಂಡಲದ ಅಧ್ಯಕ್ಷೆ ಜಾನಕಿ ಕುಂಚಡ್ಕ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ದೀಪ ಬೆಳಗಿಸಿದರು. ವೇದಿಕೆಯಲ್ಲಿ ತಾಲೂಕು ಒಕ್ಕೂಟದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಜಿಲ್ಲಾ ಒಕ್ಕೂಟದ ಸದಸ್ಯೆ ಸುಮನಾ ಕೃಪಾಶಂಕರ್, ಮಹಿಳಾ ಮಂಡಲದ ಗೌರವಾಧ್ಯಕ್ಷೆ ವಾರಿಜ ವೇಣುಗೋಪಾಲ, ಸದಾಶಿವ ದೇವಸ್ಥಾನದ ವ್ಯ.ಸ.ಸದಸ್ಯೆ ನಳಿನಿ ನಾರಾಯಣ ರೈ ಉಪಸ್ಥಿತರಿದ್ದರು.


ನೂತನ ಅಧ್ಯಕ್ಷೆಯಾಗಿ ಯಶೋಧ ಕುಡೆಕಲ್ಲು, ಉಪಾಧ್ಯಕ್ಷೆ ಗೀತಾ ಸುಧಾಮ ಆಲೆಟ್ಟಿ, ಕಾರ್ಯದರ್ಶಿ ಜಲಜಾಕ್ಷಿ ಮಹಾಬಲ ಶೆಟ್ಟಿ ಆಲೆಟ್ಟಿ, ಖಜಾಂಜಿ ಬೇಬಿ ಆಲೆಟ್ಟಿ, ನಿರ್ದೇಶಕರಾಗಿ ಸುಂದರಿ ಮೊರಂಗಲ್ಲು, ಮೀನಾಕ್ಷಿ ಗಡಿಪಣೆ, ಪ್ರೇಮ ನಾರ್ಕೋಡು, ಚಂದ್ರಾವತಿ ಕುಡೆಕಲ್ಲು, ಅನಂತೇಶ್ವರೀ ಕುಂಚಡ್ಕ, ಪದ್ಮಾವತಿ ಕುಂಚಡ್ಕ, ಮಮತ ಕೋಲ್ಚಾರು ಇವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಒಕ್ಕೂಟದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ ಪದ ಪ್ರಧಾನ ನೆರವೇರಿಸಿದರು. ಜಲಜಾಕ್ಷಿ ಆಲೆಟ್ಟಿ ಸ್ವಾಗತಿಸಿದರು. ಸರೋಜಿನಿ ಕುಡೆಕಲ್ಲು ವಂದಿಸಿದರು. ಗೀತಾ ಸುಧಾಮ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.