ಅರಂತೋಡು  : ಉಮ್ರಾ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

0

ಬದ್ರಿಯಾ ಜುಮಾ ಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್(ರಿ) ಅರಂತೋಡು ಇದರ ಜಂಟಿ ಆಶ್ರಯದಲ್ಲಿ ಪವಿತ್ರ ಉಮ್ರಾ ಯಾತ್ರೆಗೆ ಮಕ್ಕಾಕ್ಕೆ ತೆರಲಿರುವ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಕಾರ್ಯದರ್ಶಿ ಪಸೀಲು, ಸೂಫಿ ಹಾಗೂ ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸದ ಅಧ್ಯಾಪಕ ಬಹು| ಸಹದ್ ಪೈಝಿಯವರಿಗೆ ಬೀಳ್ಕೋಡುಗೆ ಸಮಾರಂಭವು ಸೆಪ್ಟೆಂಬರ್ 09 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜುಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ವಹಿಸಿದರು, ದುವಾ ನೆರವೇರಿಸಿ ಮಾತನಾಡಿದ ಸ್ಥಳೀಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿಯವರು ಪವಿತ್ರ ಉಮ್ರಾ ಯಾತ್ರೆಗೆ ತೆರಳುವ ಇವರು ಭಾಗ್ಯವಂತರು, ಧನಿಕನಾದರೆ ಸಾಲದು ಅದ್ರುಷ್ಟವು ಬೇಕು. ಅದ್ರುಷ್ಟವಂತರಾದ ತಾವುಗಳು ಅಲ್ಲಿನ ಪವಿತ್ರ ಸ್ಥಳಗಳನ್ನು ಸಂದರ್ಶಿಸುವಾಗ ಯಾವುದೆ ಭಾಹ್ಯ ಚಿಂತನೆಯನ್ನು ಮಾಡದೆ ಏಕಾಗ್ರತೆಯಿಂದ ಒಳಿತಿಗಾಗಿ ಪ್ರಾರ್ಥಿಸಬೇಕೆಂದರು.
ಅನ್ವಾರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ಜಮಾಅತ್ ಕೋಶಾಧಿಕಾರಿ ಬದ್ರುದ್ದೀನ್ ಪಟೇಲ್ ನಿವ್ರತ್ತ ಉಪನ್ಯಾಸಕ ಅಬ್ಧಲ್ಲ ಮಾಸ್ಟರ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ಹರಿ, ಹಾಜಿ ಕೆ.ಎಂ.ಮೊಹಮ್ಮದ್, ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ಸಂಶುದ್ದೀನ್ ಪೆಲ್ತಡ್ಕ, ಮೊದಲಾದವರು ಉಪಸ್ಥಿತರಿದ್ದರು.
ಜಮಾಅತ್ ಕಾರ್ಯದರ್ಶಿ ಕೆ.ಎಂ. ಮೂಸಾನ್ ಸ್ವಾಗತಿಸಿದರು ಎ.ಹನೀಫ್ ವಂದಿಸಿದರು ಅಝಾರುದ್ಧೀನ್ ಕಾರ್ಯಕ್ರಮ ನಿರೂಪಿಸಿದರು.