ಮುರುಳ್ಯ ಗ್ರಾಮಪಂಚಾಯತ್ ನಲ್ಲಿ ಜಮಾಬಂದಿ ಕಾರ್ಯಕ್ರಮ

0

 

 

 

ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ 2021- 22ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆಪ್ಟೆಂಬರ್ 13ರಂದು ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಕು. ಜಾನಕಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ನಿರ್ದೇಶನದಂತೆ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ರಶ್ಮಿ ಎಸ್. ಆರ್. ಜಮಾಬಂದಿ ಅಧಿಕಾರಿಯಾಗಿದ್ದರು. ಹಿ.ಉ.ವ.ಇಲಾಖೆಯ ಸುಳ್ಯ ವಿಸ್ತರಣಾಧಿಕಾರಿಗಳು ಮತ್ತು ತಾಲ್ಲೂಕು ಅಧಿಕಾರಿ ಶ್ರೀಮತಿ ಶುಭಾ ಸಭಾ ಕಾರ್ಯ ಕಲಾಪ ನಿರ್ವಹಿಸಿದರು. ಅನುದಾನದ ಬಳಕೆ ಯನ್ನು ಕೆಲವು ಕಡೆ ವೀಕ್ಷಿಸಲಾಯಿತು. ಶಾಂತಿನಗರ ಶಾಲಾ ಮಕ್ಕಳು ನಾಡಗೀತೆ ಹಾಡಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ವನಿತಾ ಸುವರ್ಣ, ಪಿಡಿಒ ದಯಾನಂದ ಪತ್ತುಕುಂಜ, ಕಾರ್ಯದರ್ಶಿ ಸೀತಾರಾಮ ಎಸ್. ಇದ್ದರು. ಸಭೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಪುಷ್ಪಾವತಿ ಕುಕ್ಕಟ್ಟೆ, ಶೀಲಾವತಿ ಗೋಳ್ತಿಲ, ಮೋನಪ್ಪ ಗೌಡ ಅಲೇಕಿ, ಸುಂದರ ಗೌಡ ಶೇರ, ಕರುಣಾಕರ ಹುದೇರಿ,ಜಿ.ಪಂ. ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಹೈಸ್ಕೂಲ್, ಪ್ರಾಥಮಿಕ ಶಾಲಾ ಶಿಕ್ಷಕಿಯರು, ಶಾಲಾ ಎಸ್ ಡಿಎಂಸಿ ಅಧ್ಯಕ್ಷರು ಫಲಾನುಭವಿಗಳು ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು. ಪಿಡಿಒ ದಯಾನಂದ ಪತ್ತುಕುಂಜ ಸ್ವಾಗತಿಸಿದರು ಕಾರ್ಯದರ್ಶಿ ಸೀತಾರಾಮ ಎಸ್. ವರದಿ ವಾಚಿಸಿದರು. ಪ್ರದೀಪ್ ರೈ ವಂದಿಸಿದರು.