ಶಾಂತಿನಗರ ಶಾಲಾ ಮಂತ್ರಿಮಂಡಲ ರಚನೆ : ಶಾಲಾ ನಾಯಕಿ ಇಮ್ನ ಫಾತಿಮಾ

0

ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ಮೇ.೩೧ ರಂದು ರಚನೆಯಾಯಿತು. ಎಲ್ಲಾ ವಿದ್ಯಾರ್ಥಿಗಳು ಮತದಾನದ ಮೂಲಕ ಶಾಲಾ ನಾಯಕಿಯನ್ನು ಆಯ್ಕೆ ಮಾಡಿದರು.

ಶಾಲಾ ನಾಯಕಿ ೮ನೇ ತರಗತಿಯ ಇಮ್ನ ಫಾತಿಮಾ, ಉಪನಾಯಕಿ ೭ನೇ ತರಗತಿಯ ಅನ್ವಿತ ಕೆ, ವಿದ್ಯಾಮಂತ್ರಿ ೮ನೇ ತರಗತಿಯ ಶಝ್ನ ಮರಿಯಂ, ಉಪ ವಿದ್ಯಾಮಂತ್ರಿ ೭ನೇ ತರಗತಿಯ ಗೌತಮಿ, ಶಿಸ್ತು ಮಂತ್ರಿ ೭ನೇ ತರಗತಿಯ ಅಲ್ಫಿಯಾ ಜಿ.ಎ., ಉಪಶಿಸ್ತು ಮಂತ್ರಿ ೬ನೇ ತರಗತಿಯ ನಿಖಿತ, ಗೃಹ ಮಂತ್ರಿ ೮ನೇ ತರಗತಿಯ ಚಿಂತನ್, ಉಪಗೃಹ ಮಂತ್ರಿ ೮ನೇ ತರಗತಿ ಪ್ರಣಾಮ್, ಸಾಂಸ್ಕೃತಿಕ ಮಂತ್ರಿ ೮ನೇ ತರಗತಿಯ ವಂಶಿ ಎಲ್., ಉಪಸಾಂಸ್ಕೃತಿಕ ಮಂತ್ರಿ ೫ನೇ ತರಗತಿಯ ತೃಪ್ತಿ ಭಟ್, ಆರೋಗ್ಯ ಮಂತ್ರಿ ೮ನೇ ತರಗತಿಯ ಶೈಮಾ ಪಿ.ಎಸ್., ಉಪ ಆರೋಗ್ಯ ಮಂತ್ರಿ ೭ನೇ ತರಗತಿಯ ಶ್ರೇಯಾ ಬಿ., ಕೃಷಿ ಮಂತ್ರಿ ೮ನೇ ತರಗತಿಯ ಪವೀನ್, ಉಪಕೃಷಿ ಮಂತ್ರಿ ೭ನೇ ತರಗತಿಯ ಅಬಿಲ್ ಮತ್ತು ಶಶಾಂತ್, ನೀರಾವರಿ ಮಂತ್ರಿ ೮ನೇ ತರಗತಿಯ ಹರ್ಷಿತಾ, ಉಪ ನೀರಾವರಿ ಮಂತ್ರಿ ೬ನೇ ತರಗತಿಯ ನಿಷಾಲ್, ಕ್ರೀಡಾ ಮಂತ್ರಿ ೮ನೇ ತರಗತಿಯ ಮುಹಮ್ಮದ್ ಅರ್ಫಾಝ್, ಉಪ ಕ್ರೀಡಾ ಮಂತ್ರಿ ೬ನೇ ತರಗತಿಯ ನಿಹಾಲ್ ಎಸ್.ಪಿ., ಆಹಾರ ಮಂತ್ರಿ ೮ನೇ ತರಗತಿಯ ಮೋಕ್ಷಿತಾ, ಉಪ ಆಹಾರ ಮಂತ್ರಿ ಶಿಬ್ನಾ ಫಾತಿಮಾ, ಸ್ವಚ್ಛತಾ ಮಂತ್ರಿ ೮ನೇ ತರಗತಿಯ ಮಿಸಿರಿಯಾ, ಉಪ ಸ್ವಚ್ಛತಾ ಮಂತ್ರಿ ೬ನೇ ತರಗತಿಯ ಆತ್ಮೀ ಪಿ.ಎಸ್., ಗ್ರಂಥಾಲಯ ಮಂತ್ರಿ ೮ನೇ ತರಗತಿಯ ಅಶ್ವಿನಿ, ಉಪ ಗ್ರಂಥಾಲಯ ಮಂತ್ರಿ ೭ನೇ ತರಗತಿಯ ರಿತೀಕ್ಷಾ, ವಿರೋಧ ಪಕ್ಷದ ನಾಯಕ ೮ನೇ ತರಗತಿಯ ಮುಹಮ್ಮದ್ ಅಮಾನ್, ವಿರೋಧ ಪಕ್ಷದ ನಾಯಕಿ ಫಾತಿಮತ್ ೮ನೇ ತರಗತಿಯ ಐಪುನ ಇವರನ್ನು ಆರಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.