ಸುಳ್ಯ ರೋಟರಿ ಕ್ಲಬ್ ವತಿಯಿಂದ ವಿಶೇಷ ಚೇತನ ವ್ಯಕ್ತಿಗೆ ಮನೆ ಹಸ್ತಾಂತರ

0

ಕೀ ಹಸ್ತಾಂತರಿಸಿ ಶುಭ ಹಾರೈಸಿದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್

ರೋಟರಿ ಕ್ಲಬ್ ಸುಳ್ಯ ವತಿಯಿಂದ ರೋಟರಿ ಜಿಲ್ಲಾ ಅನುದಾನದಿಂದ ವಿಶೇಷ ಚೇತನ ವ್ಯಕ್ತಿಗೆ ನಿರ್ಮಿಸಿದ 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾರ್ಗ ಎಂಬಲ್ಲಿ ಬೇಡು ಎಂಬುವರಿಗೆ ನಿರ್ಮಿಸಿದ ಮನೆ ಇದಾಗಿದ್ದು ರೋಟರಿ ಜಿಲ್ಲಾ ಗವರ್ನರ್ ರೊ. ಪ್ರಕಾಶ್ ಕಾರಂತ್ ಮನೆಯ ಕೀ ಹಸ್ತಾಂತರಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ ದೀಪ ಪ್ರಜ್ವಲನೆ ಮಾಡಿದರು.
ವಲಯ 5 ರ ಅಸಿಸ್ಟೆಂಟ್ ಗವರ್ನರ್ ರೊ ಶಿವರಾಮ ಏನೆಕಲ್ಲು ಫಲಾನುಭವಿಗೆ ಮಂಚ ಹಾಗೂ ಹಾಸಿಗೆ ಹಸ್ತಾಂತರ ಮಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೊ ಪುರಂದರ ರೈ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಝೋನಲ್ ಲೆಫ್ಟಿನೆಂಟ್ ರೊ ಪ್ರೀತಮ್ ಡಿಕೆ,ರೊ ಸವಣೂರು ಸೀತಾರಾಮ ರೈ,ರೊ ಮಂಜುನಾಥ ಆಚಾರ್ಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಣಿಮರಡ್ಕ, ರೋಟರಿ ಸುಳ್ಯ ಸಿಟಿ ಅಧ್ಯಕ್ಷ ಮುರುಳಿಧರ ರೈ, ಹಿರಿಯರಾದ ಬಾಪು ಸಾಹೆಬ್ ಮೊದಲಾದವರು ಉಪಸ್ಥಿತರಿದ್ದರು.

ಮನೆ ಹಸ್ತಾಂತರದ ಬಳಿಕ ಅಕ್ಷಯ್ ಕೆ ಸಿ,ವಿನುತಾ ಪಾತಿಕಲ್ಲು, ಪ್ರಾಜೆಕ್ಟ್ ಮ್ಯಾನೇಜರ್ ಪ್ರಭಾಕರನ್ ನಾಯರ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಮನೆ ನಿರ್ಮಾಣದಲ್ಲಿ ನೇತೃತ್ವ ವಹಿಸಿದ್ದ ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ಚಂದ್ರಶೇಖರ ಪೇರಾಲು, ಹಾಗೂ ಪ್ರಭಾಕರನ್ ನಾಯರ್ ರವರಿಗೆ ಗ್ರಾಮ ಪಂಚಾಯತಿ ವತಿಯಿಂದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಸನ್ಮಾನಿಸಿ ಗೌರವಿಸಿದರು.
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರ ಶೇಖರ ಪೇರಾಲು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೊ ಮಧುರಾ ಎಂ ಆರ್ ವಂದಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸುಳ್ಯ ಸದಸ್ಯರುಗಳಾದ ಪ್ರಭಾಕರ್ ಸಿ ಎಚ್, ಕೇಶವ ಪಿ ಕೆ, ಆನಂದ್ ಕಂಡಿಗ, ಹರಿರಾಯ ಕಾಮತ್,ಗಣೇಶ್ ಆಳ್ವ,ಕೃಷ್ಣ ಭಟ್,ಜಗದೀಶ್ ಅಡ್ತಲೆ,ರಜತ್ ಅಡ್ಕಾರ್,ಲತಾ ಮಧುಸೂದನ್, ಮಧುಸೂದನ್,ನವೀನ್ ಚಂದ್ರ ನಾಯಕ್,ಅಡ್ವಕೇಟ್ ಪ್ರದೀಪ್, ಜಿತೇಂದ್ರ,ಬೆಳ್ಳಿಯಪ್ಪ ಗೌಡ, ಜೆ ಕೆ ರೈ ಮೊದಲಾದವರು ಭಾಗವಹಿಸಿದ್ದರು.