V4 ಚಾನೆಲ್ ನ 18ರ ಸಂಭ್ರಮದಲ್ಲಿ ಮುತ್ತಮ್ಮ ಬಾಳಿಲರಿಗೆ ಸನ್ಮಾನ

0

V4 ಚಾನೆಲ್ ನ 18ರ ಸಂಭ್ರಮದಲ್ಲಿ ಜಾನಪದ ಕಲಾವಿದೆ ಶ್ರೀಮತಿ ಮುತ್ತಮ್ಮ ಬಾಳಿಲರನ್ನು ಸನ್ಮಾನಿಸಲಾಯಿತು.


ಬಾಳಿಲ ಗ್ರಾಮದ ಬಾಳಿಲ ಮನೆ ಮುತ್ತಮ್ಮ ಬಿ ಇವರು ಜಾನಪದ ಪಾಡ್ದನ ಕಲೆಯನ್ನು ಎಳವೆಯಲ್ಲಿಯೇ ಮೈಗೂಡಿಸಿಕೊಂಡು ಬೆಳೆದವರು. ತನ್ನ ತಾಯಿ ಗುಲಾಬಿ ಅಜಲ್ತಿಯವರಿಂದ ನೇಜಿ ಪಾಡ್ದನ, ದೈವದ ಪಾಡ್ತನವನ್ನು ಅಭ್ಯಾಸಮಾಡಿಕೊಂಡಿದ್ದರು.

ಇವರು ಶ್ರೀ ಮಂಜುನಾಥೇಶ್ವರ ಜಾನಪದ ಕಲಾ ಸಂಘ ಬಾಳಿಲ ತಂಡದ ಸದಸ್ಯೆಯಾಗಿ, ಸುಳ್ಯ, ಪುತ್ತೂರು ತಾಲೂಕುಗಳ ಹಲವು ವೇದಿಕೆಗಳಲ್ಲಿ ಜಾನಪದ ಪಾಡ್ದನ, ಜಾನಪದ ನೃತ್ಯಗಳನ್ನು ಪ್ರದರ್ಶಿಸಿರುತ್ತಾರೆ. ಓ ಬೇಲೇ, ಚಂದಕ್ಕು, ಮಾದಿರ, ಕನ್ಯಾಪು ಪಾಡ್ದನಗಳನ್ನು ಹಾಡಿಕೊಂಡು ನೃತ್ಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿರುತಾರೆ. 42 ವರ್ಷ ವಯಸ್ಸಿನ ಶ್ರೀಮತಿ ಮುತ್ತಮ್ಮ ಪ್ರಸ್ತುತ ಪತಿ ಮೋನಪ್ಪ ಬಿ, ಪುತ್ರಿ ಹೇಮಾವತಿಯವರೊಂದಿಗೆ ಬಾಳಿಲದಲ್ಲಿ ವಾಸವಿದ್ದು, ಬೀಡಿ ಕಟ್ಟುವ ಕಾಯಕವನ್ನು ಜೀವನೋಪಾಯಕ್ಕಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಸನ್ಮಾನ ಸಂದರ್ಭದಲ್ಲಿ V4 ಚಾನೆಲ್ ನ ಪ್ರಧಾನ ಸಂಪಾದಕರಾದ ಲಕ್ಷ್ಮಣ ಕುಂದರ್, ಬೆಳ್ಳಾರೆ ಭಾಗದ ವರದಿಗಾರರಾದ ಪುಷ್ಪರಾಜ್ ಶೆಟ್ಟಿ ಪೆರುವಾಜೆ ಮತ್ತು ಸಿಬ್ಬಂದಿಗಳು, ಜಯರಾಮ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.