ಕಲ್ಲುಗುಂಡಿ : ಸ್ಟಡಿ ಲಿಂಕ್ ಟ್ಯುಟೋರಿಯಲ್ಸ್‌ನ 6 ವಿದ್ಯಾರ್ಥಿಗಳು ನವೋದಯ ತಗರತಿಗೆ ಆಯ್ಕೆ

0

ದ.ಕ.ಸಂಪಾಜೆಯ ಕಲ್ಲುಗುಂಡಿಯಲ್ಲಿ ಹರೀಶ್ ಊರುಬೈಲು ಮತ್ತು ಧನ್ಯಾ ಹರೀಶ್ ಊರುಬೈಲುರವರ ಸಾರಥ್ಯದಲ್ಲಿ ನಡೆಯುತ್ತಿರುವ ಸ್ಟಡಿ ಲಿಂಕ್ ಟ್ಯುಟೋರಿಯಲ್ಸ್‌ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಆರು ಮಂದಿ ವಿದ್ಯಾರ್ಥಿಗಳು ನವೋದಯ ತರಗತಿಗೆ ಆಯ್ಕೆಯಾಗಿರುತ್ತಾರೆ.

ಪಿ.ಆರ್.ನಾಗೇಶ್ ಮತ್ತು ಮಮತಾ ದಂಪತಿಗಳ ಪುತ್ರಿ ಶ್ರಾವಣಿ ಪಿ.ಎನ್,ರಾಜಾರಾಮ.ಕೆ.ಕೆ.ಮತ್ತುದೇವಕಿ .ಕೆ.ದಂಪತಿಗಳ ಪುತ್ರಿ ಸಮೃದ್ಧಿ ಕೆ.ಆರ್.,ವೆಂಕಟ್ರಮಣ. ಪಿ. ಹೆಚ್.ಮತ್ತು ರತ್ನಾವತಿ ದಂಪತಿಗಳ ಪುತ್ರಿ ಧನ್ಯಾ ಪಿ.ವಿ.,ಚಿದಾನಂದ.ಕೆ.ಎಸ್. ಮತ್ತು ರೂಪಶ್ರೀ .ಕೆ.ಸಿ.ದಂಪತಿಗಳ ಪುತ್ರಿ ಹೇಮಾನ್ಯ.ಕೆ.ಸಿ.,ಚೆನ್ನಬಸಪ್ಪ .ಎಸ್.ಮತ್ತು ಮಂಜುಳಾ. ಟಿ.ಎಸ್.ದಂಪತಿಗಳ ಪುತ್ರಿ ತನ್ಮಯಿ.ಆರ್.ಸಿ.,ಮತ್ತು ದಿವ್ಯಾರವರ ಪುತ್ರಿ ನಿಶಾ ಎಸ್. ಯು.ಆಯ್ಕೆಯಾಗಿದ್ದಾರೆ.