ಬಾಳಿಲ: ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಮುಪ್ಪೇರ್ಯ ಇವರಿಂದ ವಿದ್ಯಾಬೋಧಿನೀ ಶಾಲೆಯಲ್ಲಿ ತರಕಾರಿ ತೋಟ ರಚನೆ

0

ಬಾಳಿಲ, ಮುಪ್ಪೇರ್ಯ ಭಾಗದಲ್ಲಿ ಬಹಳಷ್ಟು ಸಾರ್ವಜನಿಕ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಬಾಳಿಲ ಮುಪ್ಪೇರ್ಯ ಇವರಿಂದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಶ್ರಮದಾನದ ಮೂಲಕ ತರಕಾರಿ ತೋಟ ರಚನೆ ಮಾಡಲಾಯಿತು.

ತಂಡದಲ್ಲಿ ಹರಿಣಾಕ್ಷಿ ಬರೆಮೇಲು, ಜಾಹ್ನವಿ ಕಾಂಚೋಡು, ವಿದ್ಯಾ ಬರೆಮೇಲು, ಗೀತಾ .ಡಿ ಎಸ್, ಪುಷ್ಪಲತಾ ಬಿ.ಎನ್, ಪ್ರೇಮಲತಾ ಮರುವಂಜ ಸಹಕರಿಸಿದರು.