ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ವಾರ್ಷಿಕೋತ್ಸವ ಸಂಭ್ರಮಾಚರಣೆ

0

ಸುಳ್ಯ ಕೆ. ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ “ಕಲಾಕಾರ್ 2023” ಜೂನ್ 24ರಂದು ಅಮರಶ್ರೀ ಭಾಗ್‌ನ ಶ್ರೀ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.

ಕೆ.ವಿ.ಜಿ. ಚಾರಿಟೇಬಲ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಕೆ.ವಿ. ರೇಣುಕಾಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿ.ಟಿ.ಯು. ಮಂಗಳೂರು ವಿಭಾಗೀಯ ಅಧಿಕಾರಿ ಡಾ. ಶಿವಕುಮಾರ್ ಹೆಚ್. ಆರ್. ಭಾಗವಹಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಲೇಜಿನ ಬೆಳವಣಿಗೆ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಲೇಜಿನ ವಿದ್ಯಾರ್ಥಿ ಯುವ ಸಮೂಹಕ್ಕೆ ಡಾ. ಕೆ. ವಿ.ಜಿ. ಅವರು ಸುಳ್ಯವನ್ನು ಶಿಕ್ಷಣ ಕಾಶಿಯನ್ನಾಗಿ ನಿರ್ಮಿಸಲು ಮಾಡಿದ ತ್ಯಾಗಗಳನ್ನು ನೆನೆದರು ಹಾಗೂ ಇದಕ್ಕಾಗಿ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು ಜೊತೆಯಾಗಿ ಕೈಜೋಡಿಸಿದ್ದಾರೆ ಎಂದರು. ಅಧ್ಯಕ್ಷರ ನೆಲೆಯಲ್ಲಿ ಮತನಾಡಿದ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮುಂದಾಳತ್ವ ಹಾಗೂ ಸಿಬ್ಬಂದಿ ವರ್ಗದವರು ಒಂದೇ ಕುಟೂಂಬದಂತೆ ಕೆಲಸ ನಿರ್ವಹಿಸುತ್ತಿರುವುದು ಕಾಲೇಜಿನ ಬೆಳವಣಿಗೆಗೆ ಪ್ರಮುಖ ಕಾರಣ ಎಂದು ನುಡಿದರು ಹಾಗೂ ಇದೇ ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಉಜ್ವಲ್ ಯು.ಜೆ. ಅವರು ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು ಅದು ಅವರ ಸರ್ವಾಂಗೀಣ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಾಂಶುಪಾಲರಾದ ಡಾ. ಸುರೇಶ ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಹಾಗೂ ಡಾ. ಶಿವಕುಮಾರ್ ಹೆಚ್. ಆರ್. ಅವರನ್ನು ರೇಣುಕಾ ಪ್ರಸಾದ್ ಕೆ.ವಿ.ಯವರು ಶಾಲು ಹೊದಿಸಿ ಸನ್ಮಾಾನಿಸಿದರು. ಈ ವರ್ಷದ ಪಿ.ಹೆಚ್.ಡಿ. ಪದವಿ ಪಡೆದ
ಡಾ. ಭಾಗ್ಯಜ್ಯೋತಿ ಕೆ.ಎಲ್. ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಇದರ ಜೊತೆಗೆ ವಿ.ಟಿ.ಯುಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಕೃತಿ ಹಾಗೂ ಸಿವಿಲ್ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಪ್ರಜ್ಞ ಇವರನ್ನು ಅಭಿನಂದಿಸಲಾಯಿತು.


ಅಲ್ಲದೆ ಅಥ್ಲೆಟಿಕ್ಸ್‌‌ನಲ್ಲಿ ಸಾಧನೆಗೈದ ಶಶಾಂಕ್ ಬೆಳೆಗದ್ದೆ ಹಾಗೂ ತಿಶನ್ ಅವರನ್ನು ಸನ್ಮಾನಿಸಲಾಯಿತು. 2023ನೇ ಸಾಲಿನ ಪದವಿ ಪೂರ್ಣಗೊಳಿಸಿದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಪ್ರಶಸ್ತಿಯನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಬ್ದುಲ್ ಮುನಾವರ್ ಕಂಪ್ಯೂಟರ್ ಸೈನ್ಸ್‌ & ಇಂಜಿನಿಯರಿಂಗ್‌ನಲ್ಲಿ ಆಕಾಶ್ ಕೆ.ಜಿ. ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಶನ್ ಇಂಜಿನಿಯರಿಂಗ್‌ನಲ್ಲಿ ಕೃತಿಕಾ ಎಸ್., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಚರಿಷ್ಮಾ ಕೆ.ವೈ. ಪಡೆದುಕೊಂಡರು. ಇದೇ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಶಸ್ತಿಯನ್ನು ವಿತರಿಸಲಾಯಿತು ಹಾಗೂ ಇದೇ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಕೊಡಮಾಡುವ ಉತ್ತಮ ಪ್ರಾಾಜೆಕ್‌ಟ್‌ ಪ್ರಶಸ್ತಿಯನ್ನು ವಿವಿಧ ಇಂಜಿನಿಯರಿಂಗ್ ವಿಭಾಗಗಳ ಪ್ರಾಾಜೆಕ್‌ಟ್‌‌ಗಳಿಗೆ ವಿತರಿಸಲಾಯಿತು.

ಪ್ರಾಾರ್ಥನೆಯನ್ನು ಅನನ್ಯ ಹೆಬ್ಬಾಾರ್ ಮತ್ತು ತಂಡ ನಡೆಸಿಕೊಟ್ಟರು, ಸಪ್ತಮಿ ಸ್ವಾಗತಿಸಿ, ಸೃಷ್ಟಿ ಎಸ್. ವಂದಿಸಿದರು. ಈ ಕಾರ್ಯಕ್ರಮವನ್ನು ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಅರುಣ ಪಿ.ಜಿ. ಸಹಯೋಗದಲ್ಲಿ ಸ್ಟೃ ಎಸ್. ಕಾರ್ತಿಕ್, ಅಜ್ಮಲ್, ಕಿರಣ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.