ಸುಳ್ಯ ಸೈಂಟ್ ಜೋಸೆಫ್ ಪೂರ್ವ ಪ್ರಾಥಮಿಕ ಶಾಲೆಯ ಪ್ರಥಮ ಶಿಕ್ಷಕ ಪೋಷಕರ ಸಭೆ

0


ಸುಳ್ಯದ ಸೈಂಟ್ ಜೋಸೆಫ್ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕ ಪೋಷಕರ ಸಭೆಯು ಜೂನ್ ೨೬ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿಸೋಜಾ ವಹಿಸಿ ಶುಭ ಹಾರೈಸಿದರು. ಸಭೆಯು ಯುಕೆಜಿ ಪುಟಾಣಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶಾಲಾ ಶೈಕ್ಷಣಿಕ ಚಟುವಟಿಕೆಗಳ ವರದಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯದರ್ಶಿ ಶ್ರೀಮತಿ ಶೋಭಾ ವಾಚಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮ ಶಾಲಾ ನಿಯಮಗಳ ಬಗ್ಗೆ ಸಲಹೆ ಸೂಚನೆ ನೀಡಿದರು.


ಕಳೆದ ಸಾಲಿನ ಪೋಷಕ ಸಮಿತಿಯ ಅಧ್ಯಕ್ಷೆ ಶ್ರೀಮತಿ ಅನುರಾಧ ಕುರುಂಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಾಲೆಯಲ್ಲಿ ನಡೆಯಲಿರುವ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ ಮಾಹಿತಿ ನೀಡಿ, ಪೋಷಕರ ಸಹಕಾರವನ್ನು ಯಾಚಿಸಿದರು. ಸಹ ಶಿಕ್ಷಕಿ ಶ್ರೀಮತಿ ರೇಷ್ಮ ಮಾಡ್ತಾ ಸ್ವಾಗತಿಸಿ, ,ಶ್ರೀಮತಿ ಸುಮತಿ ವಂದಿಸಿದರು . ಸಹ ಶಿಕ್ಷಕಿ ಶ್ರೀಮತಿ ಆಶಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಮರಿಯಕ್ರಾಸ ಹಾಗೂ ಶ್ರೀಮತಿ ಕವಿತಾ ಸಹಕರಿಸಿದರು