ಮುಳ್ಯ-ಅಟ್ಲೂರು : ಪರಿಸರ ಕುರಿತು‌ ಜಾಗೃತಿ – ಸ್ಪರ್ಧೆ

0

ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನೆಡುವ ಕಾರ್ಯಕ್ರಮ ಜೂ.28 ರಂದು ನಡೆಯಿತು.
ತಾಲೂಕು ಜನಜಾಗೃತಿ ನಿಕಟಪೋರ್ವ ಅಧ್ಯಕ್ಷ ರವಿಪ್ರಕಾಶ್ ಆಟ್ಲೂರು ಮತ್ತು ರೋಟರಿ ನಿವೃತ್ತ ಪ್ರಾಂಶುಪಾಲರಾದ ಅಚ್ಯುತ ಆಟ್ಲೂರು ದೀಪ ಬೆಳಗಿಸಿ, ತೆಂಗಿನ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.


ಶಾಲಾ ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು.


ಈ ಸಂದರ್ಭ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವಿ ಪ್ರಸಾದ್, ತಾಲೂಕಿನ ಕೃಷಿ ಅಧಿಕಾರಿ ರಮೇಶ, ವಲಯದ ಮೇಲ್ವಿಚಾರಕರು ವಿಶಾಲ ಕೆ, ಶಾಲೆಯ ಮುಖ್ಯಪಾಧ್ಯಾಯ ಶಿವರಾಮ ಕೇನಾಜೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ಜನಜಾಗೃತಿ ಸದಸ್ಯರಾದ ಸುಬ್ಬ ಪಾಟಾಲಿ ಮುಳ್ಯ, ಒಕ್ಕೂಟದ ಅಧ್ಯಕ್ಷ ರಮೇಶ, ಸೇವಾ ಪ್ರತಿನಿಧಿ ಭಾರತಿ ಸೌಮ್ಯ, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಒಕ್ಕೂಟದ ಪದಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ದೊಡ್ಡೇರಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀಮತಿ ಉಷಾ ಸ್ವಾಗತಿಸಿ, ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕರಾದ ವಿಶಾಲ ನಿರೂಪಿಸಿದರು.