ಲಿಟ್ಲ್ ಫ್ಲವರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ನೋಟು ಪುಸ್ತಕ ಮತ್ತು ಲೋಟ ವಿತರಣೆ

0

ಸುಳ್ಯದ ಲಿಟ್ಲ್ ಫ್ಲವರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆಲ್ಸನ್ ಲಿಟ್ಲ್ ಫ್ಲವರ್ ಇವರ ಮೊಮ್ಮಗ ದಿ. ಮಾಸ್ಟರ್ ಜೋಶುವಾ ಸ್ಮರಣಾರ್ಥ ಗಾಂಧಿನಗರ ಕೆಪಿಎಸ್ ಪ್ರಾಥಮಿಕ ವಿಭಾಗದ ಒಂದನೇ ತರಗತಿ ಮಕ್ಕಳಿಗೆ ಗ್ಲಾಸ್ ಮತ್ತು ನೋಟು ಪುಸ್ತಕ ವಿತರಣೆ ಜೂ.28 ರಂದು ಶಾಲೆಯಲ್ಲಿ ನಡೆಯಿತು.

ನೆಲ್ಸನ್ ರವರು ಮಕ್ಕಳಿಗೆ ನೋಟು ಪುಸ್ತಕ ಮತ್ತು ಗ್ಲಾಸ್ ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆಪಿಎಸ್ ಪ್ರಾಂಶುಪಾಲ ಅಬ್ದುಲ್ ಸಮಾದ್, ಪ್ರೌಢಶಾಲಾ ಶಿಕ್ಷಕ ಚಿನ್ನಪ್ಪ ಪತ್ತುಕುಂಜ, ಪ್ರಾಥಮಿಕ ಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಎ.ಜಿ ಭವಾನಿ, ಸುದ್ದಿ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಪ್ರಾಥಮಿಕ ವಿಭಾಗದ ಸಹ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

ಸುದ್ದಿ ವರದಿಗಾರ ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.