ಮೊಗರ್ಪಣೆ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಝ್ಃಹ ನಮಾಜ್ ಹಾಗೂ ಈದ್ ಸಂದೇಶ

0

ತ್ಯಾಗ ಬಲಿದಾನಕ್ಕೆ ಅನರ್ಥ ಕಲ್ಪಿಸದ ರೀತಿಯಲ್ಲಿ ಈದ್ ಅಚರಿಸಿ: ಶೌಕತ್ ಆಲಿ ಸಖಾಫಿ

ತ್ಯಾಗ , ಬಲಿದಾನ ಪ್ರತೀಕ ವಾಗಿ ಆಚರಿಸುವ ಈದ್ ಉಲ್ ಅಝ್ಃ ( ಬಕ್ರೀದ್) ಹಬ್ಬವನ್ನು ಮೊಗರ್ಪಣೆ ಮಸೀದಿಯಲ್ಲಿ ಈದ್ ನಮಾಝ್ ಹಾಗೂ ಈದ್ ಸಂದೇಶದೊಂದಿಗೆ ಆಚರಿಸಲಾಯಿತು.


ಪ್ರಾರ್ಥನೆಗೆ ಹಾಗೂ ಈದ್ ನಮಾಝ್ ಹಾಗೂ ಕುತುಬವನ್ನು ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಹಾಪಿಳ್ ಶೌಕತ್ ಆಲಿ ಸಖಾಫಿ ನಿರ್ವಹಿಸಿದರು.
ಮನುಷ್ಯ ಜೀವನದಲ್ಲಿ ದೇವರು ನೀಡಿದ ಮಾರ್ಗದರ್ಶನದಲ್ಲಿ ಮಾತ್ರ ಜೀವನ ನಡೆಸಬೇಕು ಹೊರತು ವಿರುದ್ಧ ರೀತಿಯಲ್ಲಿ ಅಲ್ಲ ಅಲ್ಲಾಹನ ಸಂಪ್ರೀತಿಗಾಗಿ ಪ್ರವಾದಿ ಇಬ್ರಾಹಿಂ ನೆಬಿಯವರು ಮಾಡಿದ ತ್ಯಾಗದ ಸಂಕೇತವಾಗಿ ಈದುಲ್ ಅಝ್ಃ ಆಚರಿಸುತ್ತಿದ್ದೇವೆ ಅದರಿಂದ ತ್ಯಾಗದ ಹಬ್ಬವನ್ನು ಅರ್ಥ ಪೂರ್ಣವಾಗಿ ಶಾಂತಿ ಸೌಹಾರ್ದತೆಯಿಂದ ಆಚರಿಸಿ ಎಂದು ಕರೆಕೊಟ್ಟರು‌.


ಈದ್ ದಿನದ ಸಂಭ್ರಮದ ಸಮಯದಲ್ಲಿ ವಾಹನಗಳಲ್ಲಿ ಸಂಚರಿಸುವ ಸಮಯದಲ್ಲಿ ಬಹಳ ಜಾಗೂರುಕರಾಗಬೇಕೆಂದು ಪ್ರತ್ಯೇಕವಾಗಿ ಯುವಕರಿಗೆ ಕಿವಿ‌ಮಾತು ಹೇಳಿದರು.


ನಂತರ ಸೇರಿದವರೆಲ್ಲರೂ ಪರಸ್ಪರ ಆಲಿಂಗನ ಮಾಡಿಕೊಂಡರು ಹಾಗೂ ಜಮಾಅತಿನ ಸರ್ವರೂ ಭಾಗಿಯಾಗಿದ್ದರು ಬಳಿಕ ಸಾಮೂಹಿಕ ಪಾರ್ಥನೆ ದರ್ಗಾ ಝಿಯಾರತ್ ಕಾರ್ಯಕ್ರಮ ನಡೆಯಿತು.


ಮೊಗರ್ಪಣೆ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ,ನ.ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ ಉಮ್ಮರ್ ಬೀಜದಕಟ್ಟೆ ಜಮಾಯತ್ ಅಡಳಿತ ಸಮಿತಿ ಸದಸ್ಯರು ಜಮಾಯತರು ಬಾಗವಹಿದರು.