ಕಲ್ಲಪಳ್ಳಿ: ಪೆರಿಯಾರಂ ಟ್ಯಾಂಕರ್ ಅಪಘಾತ- ಆಸ್ಪತ್ರೆಯಲ್ಲಿ ಮೃತಪಟ್ಟ ಚಾಲಕ

0

ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮಧ್ಯೆ ಪೆರಿಯಾರಂ ನಲ್ಲಿ ಸಂಭವಿಸಿದ ಟ್ಯಾಂಕರ್ ಅಫಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಗಂಭೀರ ಗಾಯಗೊಂಡಿದ್ದು ಅವರಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡ ಲಾರಿ ಚಾಲಕ ಹಾಸನ ಮೂಲದ ಪ್ರವೀಣ್ ‌ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಟ್ಯಾಂಕರ್ ನಲ್ಲಿದ್ದ ಮತ್ತೋರ್ವ ಗಾಯಗೊಂಡ ವ್ಯಕ್ತಿಯ ಸ್ಥಿತಿಯು ಗಂಭೀರವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.