ಟೈಲರ್ ಅಸೋಸಿಯೇಶನ್ : ಸುಳ್ಯ ವಲಯ ಅಧ್ಯಕ್ಷರಾಗಿ ಕುಸುಮಾಧರ ರೈ ಬೂಡು

0

ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ಸುಳ್ಯ ವಲಯ ಸಮಿತಿ ಸಭೆಯು ಜೂ.೨೭ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಅಧ್ಯಕ್ಷರಾದ ಕುಸುಮಾಧರ ರೈ ಬೂಡುರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ಸದಸ್ಯ ವಿಜಯ ಕುಮಾರ್ ರೈ, ಕ್ಷೇತ್ರ ಸಮಿತಿ ಅಧ್ಯಕ್ಷ ದಿವಾಕರ ಟಿ, ಕಾರ್ಯದರ್ಶಿ ಆಶಾ ವಿ ರೈ, ಕೋಶಾಧಿಕಾರಿ ತಾರಾ ಆರ್ ರೈ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.


ಸಭೆಯಲದಲಿ ೨೦೨೩-೨೫ನೇ ಸಾಲಿನ ಅವಧಿಗೆ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಕುಸುಮಾಧರ ರೈ ಬೂಡು, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪಲತಾ ಬೆಟ್ಟಂಪಾಡಿ, ಕೋಶಾಧಿಕಾರಿ ಸಾವಿತ್ರಿ ಅಜ್ಜಾವರ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಬಾಬಣ್ಣ, ಜತೆ ಕಾರ್ಯದರ್ಶಿಯಾಗಿ ಹೇಮಾವತಿ ಮುಳ್ಯ ಆಯ್ಕೆಯಾದರು.


ಕ್ಷೇತ್ರ ಸಮಿತಿಗೆ ಸದಸ್ಯರಾಗಿ ರವೀಂದ್ರ ಹೆಚ್, ರಾಜೇಶ್, ಯಮುನಾ, ರಾಜೇಶ್ವರಿ, ಹಸ್ತ , ವಲಯ ಸಮಿತಿಗೆ ಸದಸ್ಯರುಗಳಾಗಿ ಕಿರಣ ಕುಮಾರಿ, ಸುನಿತ, ಭಾರತಿ, ಅಶ್ವಿನಿ, ಪ್ರಫುಲ್ಲ, ಪೂರ್ಣಿಮಾ, ಸವಿತಾ ಇವರುಗಳು ಆಯ್ಕೆ ಮಾಡಲಾಯಿತು.
ಕಾರ್ಯದಶಿ ಪುಷ್ಪಲತಾ ಸ್ವಾಗತಿಸಿ, ಹೇಮಾವತಿ ಮುಳ್ಯ ವಂದಿಸಿದರು.