ರಾಜ್ಯ ಪ್ರಶಸ್ತಿ ಪುರಸ್ಕೃತ ಆಲೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮ.ಡಿ.ರಂಗನಾಥ್ ರವರಿಗೆ ಬೀಳ್ಕೊಡುಗೆ ಸಮಾರಂಭವು ಜೂ. 30 ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ರಾಜೇಶ್ವರಿ ಯವರು ವಹಿಸಿದ್ದರು.
ವೇದಿಕೆಯಲ್ಲಿ ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು, ನಿವೃತ್ತ ಕೆ.ಎಫ್.ಡಿ.ಸಿ ನಿವೃತ್ತ ಮ್ಯಾನೇಜರ್ ಲಯನ್ ರಂಗನಾಥ್,ಸಹಶಿಕ್ಷಕಿ ಶ್ರೀಮತಿ ಸೀತಮ್ಮ ಕುಡೆಕಲ್ಲು ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ
ಶಿಕ್ಷಕಿ ಪದ್ಮ.ಡಿ ಮತ್ತು ಕೆ.ಎಫ್.ಡಿ.ಸಿ. ನಿವೃತ್ತ ಮೇನೇಜರ್ ಲಯನ್ ರಂಗನಾಥ್ ದಂಪತಿಯನ್ನು ಶಾಲು ಹಾರ ಹಾಕಿ ಪೇಟ ತೊಡಿಸಿ ಫಲಪುಷ್ಪ ಸ್ಮರಣಿಕೆ ಸನ್ಮಾನ ಪತ್ರ ನೀಡಿ ಗೌರವಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಅಜ್ಜಾವರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಕಲ್ಪಲತ, ಇನ್ನರ್ ವೀಲ್ ಕ್ಲಬ್ ನ ಸದಸ್ಯೆ ಶ್ರೀಮತಿ ಜಯಲಕ್ಷ್ಮೀ ರೈ ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಶಾಲಾ ನಿರ್ವಹಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸುದೀರ್ಘ41 ವರ್ಷಗಳ ವೃತ್ತಿ ಜೀವನದ ದಿನಗಳಲ್ಲಿ ಸಹಕರಿಸಿದ ಎಲ್ಲರನ್ನೂ ನಿವೃತ್ತ ಮುಖ್ಯ ಶಿಕ್ಷಕಿ ಪದ್ಮ ಡಿ ಯವರು ಸ್ಮರಿಸಿಕೊಂಡರು.
ಚಂದ್ರಕಾಂತ ನಾರ್ಕೋಡು ಅಭಿನಂದನಾ ಭಾಷಣ ಮಾಡಿದರು.
ಶಾಲಾ ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ಅದ್ಯಾಪಕ ವೃಂದದವರು, ಅಡುಗೆ ಸಿಬ್ಬಂದಿ ವರ್ಗದವರು ನಿವೃತ್ತ ಶಿಕ್ಷಕಿಯವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಶಾಲೆಗೆ ಕೊಡುಗೆ:
ಶಾಲಾ ಮಕ್ಕಳಿಗೆ ಅಗತ್ಯವಿರುವ ಸುಮಾರು ರೂ. 26 ಸಾವಿರ ಮೌಲ್ಯದ ಆಟದ ಸಾಮಾಗ್ರಿಗಳು ಕೇರಂ,ಚೆಸ್, ಶಟಲ್ ಬ್ಯಾಡ್ಮಿಂಟನ್ ರಾಕೆಟ್ ಹಾಗೂ ವಿವಿಧ ವಯೋಮಾನದ ಮಕ್ಕಳಿಗೆ ಉಪಯೋಗವಾಗುವ ಆಧುನಿಕ ಮೊಡೆಲಿನ 5 ಸೈಕಲ್ ಗಳನ್ನು ಕೊಡುಗೆಯಾಗಿ ಶ್ರೀಮತಿ ಪದ್ಮ ಡಿ. ರಂಗನಾಥ್ ದಂಪತಿಯವರು ಶಾಲಾ ಶಿಕ್ಷಕರಿಗೆ ಹಸ್ತಾಂತರಿಸಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಸಹಶಿಕ್ಷಕ ಸುನಿಲ್ ಕಾರ್ಯಕ್ರಮ ನಿರ್ವಹಿಸಿದರು.
ಆಗಮಿಸಿದ ಎಲ್ಲರಿಗೂ ನಿವೃತ್ತ ಮುಖ್ಯ ಶಿಕ್ಷಕಿ ಯವರ ವತಿಯಿಂದ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.