ತಾಲೂಕಿನೆಲ್ಲೆಡೆ ಭಾರೀ ಮಳೆ

0

ಜಯನಗರದಲ್ಲಿ ಎರಡು ಮನೆಗಳ ಕಾಂಪೌಂಡ್ ಕುಸಿತ, ಮತ್ತೊಂದು ಮನೆಗೆ ಹಾನಿ

ಸುಳ್ಯ ತಾಲೂಕಿನಾದ್ಯಂತ ಇಂದು ಧಾರಾಕಾರ ಮಳೆ ಸುರಿದಿದ್ದು ಹಲವೆಡೆ ಹಾನಿ ಸಂಭವಿಸಿದೆ.

ಸುಳ್ಯದ ಜಯನಗರ ಪರಿಸರದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಎರಡು ಮನೆಗಳ ಕಾಂಪೌಂಡ್ ಕುಸಿದು ಪಕ್ಕದ ಮನೆಯೊಂದರ ಶೀಟುಗಳು ಹಾನಿಯಾದ ಘಟನೆ ವರದಿಯಾಗಿದೆ.

ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿ ದಾಮೋದರ ಪಡಂಬೈಲು ಎಂಬುವವರ ಮನೆಯ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ನೂತನವಾಗಿ ನಿರ್ಮಿಸಿದ್ದ ಮನೆಯ ಕಾಂಪೌಂಡ್ ಇದಾಗಿದ್ದು ಸುಮಾರು ನಷ್ಟ ಸಂಭವಿಸಿದೆ.


ಅಲ್ಲೇ ಸಮೀಪದ ರುಖಿಯಾ ಎಂಬುವರ ಮನೆಯ ಕಾಂಪೌಂಡ್ ಜನಾರ್ದನ ಗೌಡ ಎಂಬುವವರ ಮನೆಯ ಹಿಂಬದಿಯ ಮೇಲ್ಚಾವಣಿಯ ಶೀಟಿನ ಮೇಲೆ ಬಿದ್ದು ಸುಮಾರು ಹತ್ತಕ್ಕೂ ಹೆಚ್ಚು ಶೀಟುಗಳು ಹಾನಿಯಾಗಿದೆ.

ಸ್ಥಳಕ್ಕೆ ವಿಎ ತಿಪ್ಪೇಶ್, ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.