ಐವರ್ನಾಡು : ಚರಂಡಿಯಿಲ್ಲದೆ ರಸ್ತೆಯಲ್ಲೇ ಹರಿಯುತ್ತಿದ್ದ ಮಳೆ ನೀರು

0

ಚರಂಡಿ ದುರಸ್ಥಿಪಡಿಸಿದ ಇಲಾಖಾಧಿಕಾರಿಗಳು,ಹಾಗೂ ಗ್ರಾಮ ಪಂಚಾಯತ್

ಸುಳ್ಯ ಬೆಳ್ಳಾರೆ ರಸ್ತೆಯಲ್ಲಿ ಐವರ್ನಾಡು-ಬೆಳ್ಳಾರೆ ಮಧ್ಯದಲ್ಲಿ ರಸ್ತೆ ಬದಿಯ ಚರಂಡಿಗಳು ಮುಚ್ಚಿ ಹೋಗಿರುವ ಪರಿಣಾಮವಾಗಿ ಮೂರು ಕಡೆ ಕೃತಕ ನೆರೆ ಜು.02 ರಂದು ಸೃಷ್ಟಿಯಾಗಿತ್ತು.
ಈ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಸಾರವಾಗಿತ್ತು.


ವರದಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ನವರು ಇಂದು ಸ್ಥಳಕ್ಕಾಗಮಿಸಿ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿದ್ದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಸಿದರು.


ಪಿಡಬ್ಲ್ಯುಡಿ ಇಲಾಖೆಯ ಇಂಜಿನಿಯರ್ ಪರಮೇಶ್ವರ್ ಹಾಗೂ ಅಧಿಕಾರಿಗಳು ಮತ್ತು ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ,ಪಿಡಿಒ ಶ್ಯಾಮ್ ಪ್ರಸಾದ್ , ಗ್ರಾಮ ಲೆಕ್ಕಾಧಿಕಾರಿ, ಶಾಂತಾರಾಮ ಕಣಿಲೆಗುಂಡಿ ಈ ಸಂದರ್ಭದಲ್ಲಿ ಇದ್ದರು.