ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಪ್ರತಿಭಾ ಪ್ರದರ್ಶನ

0

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಜು. 04ರಂದು ಪ್ರತಿಭಾ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳನ್ನು ಸ್ಪೂರ್ತಿ, ಕೀರ್ತಿ,ಜ್ಯೋತಿ, ಶಕ್ತಿ ದಳಗಳಾಗಿ ವಿಂಗಡಿಸಿ, ಪ್ರತಿ ದಳಗಳಿಗೆ 30 ನಿಮಿಷದ ಅವಧಿಯನ್ನು ನೀಡಲಾಯಿತು. ಆ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಭಾಷಣ, ಹಾಡು. ನೃತ್ಯಗಳು, ಸ್ಕಿಟ್ ಗಳು, ಛದ್ಮವೇಶಗಳನ್ನು ಮಾಡಿದರು.

ವಿಜೇತ ದಳಕ್ಕೆ ರೋಲಿಂಗ್ ಟ್ರೋಫಿ ಮತ್ತು ಬಹುಮಾನವನ್ನು ನೀಡಲಾಯಿತು. ಪ್ರಥಮ ಸ್ಥಾನವನ್ನು ಸ್ಪೂರ್ತಿದಳವು, ದ್ವಿತೀಯ ಸ್ಥಾನವನ್ನು ಜ್ಯೋತಿ ದಳವು ಪಡೆದುಕೊಂಡಿತು. ಮುಖ್ಯ ಶಿಕ್ಷಕರಾದ ಯಶೋಧರ ಎನ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಒಟ್ಟು ಉಸ್ತುವಾರಿಯನ್ನು ಲೋಕೇಶ ಬಿ, ಅರವಿಂದ ಕಾಯಾರ, ಕವಿತಾ ಕೆ ಎನ್ ನಿರ್ವಹಿಸಿದ್ದರು. ಎಲ್ಲಾ ಶಿಕ್ಷಕರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.