ಗುತ್ತಿಗಾರಿನಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಕಬಡ್ಡಿ ಪಂದ್ಯಾಟ

0

ಪುತ್ತೂರು ತಾಲೂಕು ಬಾಲಕ, ಬಾಲಕಿಯರ ತಂಡ ಪ್ರಥಮ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ದ್ವಿತೀಯ

ಪಿ.ಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ನಡೆಯುವ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ ನಡೆಯುತಿದ್ದು ಸೆ. 22 ರಂದು ಪ್ರೌಢಶಾಲಾ ಶಾಲೆಗಳ ಪಂದ್ಯಾಟ ನಡೆಯಿತು.

ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವ ಗೌಡ ಕಾಂತಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.


ಪಿ.ಯಂ.ಶ್ರೀ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟ್ ದಂಬೆಕೋಡಿ,
ಗುತ್ತಿಗಾರು ಮೆಸ್ಕಾಂ ಸಹಾಯಕ ಇಂಜಿನಿಯರ್ ಲೊಕೇಶ್ ಎಣ್ಣೆಮಜಲು, ತಾ.ಪಂ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ, ಜಯರಾಮ ಕಡ್ಲಾರು, ನೆಲ್ಸನ್ ಕ್ರೆಸ್ಟೋಲಿನಾ , ಕಾಳಿಕಾ ಪ್ರಸಾದ್‌, ಶೀತಲ್ ಯು.ಜೆ, ಚಂದ್ರಶೇಖರ ಕಡೋಡಿ, ರವಿ ಪ್ರಕಾಶ್ ಬಳ್ಳಡ್ಕ, ಕುಶಾಲಪ್ಪ ತುಂಬತ್ತಾಜೆ, ಲೊಕೇಶ್ವರ ತುಂಬತ್ತಾಜೆ, ಪ್ರಕಾಶ್ ಮೂಡಿತ್ತಾಯ, ದುಗ್ಗಪ್ಪ ಗೌಡ ಕುಳ್ಳಪ್ಪಾಡಿ, ಪುಷ್ಪಾವತಿ ಬುಡ್ಲೆಗುತ್ತು, ವಿಶ್ವನಾಥ ಮೆಟ್ಟಿನಡ್ಕ, ಗಣೇಶ್ ಪ್ರಸಾದ್ ಸುಬ್ರಹ್ಮಣ್ಯ, ವಿನ್ಯಾಸ್ ಕೊಚ್ಚಿ, ಚಕ್ರಪಾಣಿ, ಪ್ರಾಂಶುಪಾಲೆ ಚೆನ್ನಮ್ಮ, ಮುಖ್ಯೋಪಾಧ್ಯಾಯ ಸಾವಿತ್ರಿ, ಉಮಾವತಿ, ಧನಂಜಯ ಎನ್ ವೇದಿಕೆಯ ಉಪಸ್ಥಿತರಿದ್ದರು.

ಫಲಿತಾಂಶ

ಪ್ರೌಢಶಾಲಾ ಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕು ಪ್ರಥಮ ಹಾಗೂ ಮಂಗಳೂರು ಉತ್ತರ ದ್ವಿತೀಯ ಸ್ಥಾನ ಪಡೆಯಿತು.
ಬಾಲಕಿಯರ ವಿಭಾಗದಲ್ಲಿ ಪುತ್ತೂರು ತಾಲೂಕು ಪ್ರಥಮ ಹಾಗೂ ಮಂಗಳೂರು ದಕ್ಷಿಣ ದ್ವಿತೀಯ ಸ್ಥಾನ ಪಡೆಯಿತು.