ಕನಕಮಜಲು: ಮಳಿಯಲ್ಲಿ ಮನೆಯ ಮುಂಭಾಗ ಕುಸಿತ

0

ಗ್ರಾ.ಪಂ. ವತಿಯಿಂದ ಟರ್ಪಲ್ ಹೊದಿಸಿ ತಾತ್ಕಾಲಿಕ ವ್ಯವಸ್ಥೆ – ಮನೆಯವರ ಸ್ಥಳಾಂತರ

ಕನಕಮಜಲು ಗ್ರಾಮದ ಮಳಿ ಎಂಬಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯ ಮುಂಭಾಗ ಕುಸಿತಗೊಂಡಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಭೇಟಿ ನೀಡಿ ಟರ್ಪಲ್ ಹೊದಿಸಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿದ್ದು, ಮನೆಯಲ್ಲಿ ವಾಸಿಸಲು ಅಸಾಧ್ಯವಾಗಿರುವ ಕಾರಣದಿಂದಾಗಿ ಮನೆಯವರನ್ನು ಅವರ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಿರುವ ಘಟನೆ ಜು.6ರಂದು ಸಂಭವಿಸಿದೆ.

ನಿರಂತರವಾಗಿ ಸುರಿದ ಭಾರೀ ಮಳೆಗೆ ಕನಕಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಿ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಮೆಚ್ಚು ಎಂಬವರ ಮನೆಯ ಎದುರು ಬಾಗ ಜರಿದಿತ್ತು.


ವಿಷಯ ತಿಳಿದು ಗ್ರಾಮ ಪಂಚಾಯತಿ ವತಿಯಿಂದ ತಕ್ಷಣ ಭೇಟಿ ನೀಡಿ ಮನೆಯ ಒಳಗಡೆ ಮಳೆನೀರು ಹರಿದು ಬರದಂತೆ ಟರ್ಪಲ್ ಹೊದಿಕೆ ಮಾಡಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸದ್ಯ ಮನೆಯಲ್ಲಿ ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ಇದ್ದು, ಆ ಮನೆಯವರನ್ನು ಅವರ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಯಿತು.