ಎರಡು ದಿನದ ಕಾರ್ಯಾಚರಣೆಯಲ್ಲಿ ಪತ್ತೆಯಾಗದ ಕೂರ್ನಡ್ಕ ದಲ್ಲಿನೀರು ಪಾಲಾದ ಕಾರ್ಮಿಕನ ಮೃತ ದೇಹ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯಕೂರ್ನಡ್ಕ ಎಂಬಲ್ಲಿ ಹೊಳೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ ನಾರಾಯಣ ಯಾನೆ ಬಾಲಕೃಷ್ಣನ್ ಮೃತ ದೇಹ ಎರಡು ದಿನ ಕಳೆದರೂ ಇನ್ನೂ ಪತ್ತೆಯಾಗಲಿಲ್ಲ.

ಕೇರಳದ ಕಾಂಞಂಗಾಡ್ ಸಮೀಪದವರಾಗಿದ್ದು ಕೂರ್ನಡ್ಕದಲ್ಲಿರುವ ಜೋಸ್ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸಕ್ಕೆ ಬಂದಿದ್ದ ನಾರಾಯಣ ರವರು ಕೆಲಸ ಮುಗಿಸಿ ಹಿಂತಿರುಗುವ ವೇಳೆಗೆ ಪಾಲ ದಾಟುತ್ತಿರುವ ಸಂದರ್ಭ ಆಯ ತಪ್ಪಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋದರು.
ಜತೆಯಲ್ಲಿದ್ದ ಕಾರ್ಮಿಕರು ವಿಷಯ ಸುಳ್ಯ ಪೋಲಿಸರಿಗೆ ತಿಳಿಸಿದರು.


ಸುಳ್ಯ ಎಸ್‌.ಡಿ.ಆರ್.ಎಫ್, ಅಗ್ನಿಶಾಮಕ ದಳದವರು ಸ್ಥಳೀಯ ಮುಳುಗು ತಜ್ಞರು ಪೋಲಿಸ್ ಇಲಾಖೆಯವರು ಸ್ಥಳದಲ್ಲಿ ಬೀಡು ಬಿಟ್ಟಿದ್ದು
ನೀರು ಪಾಲಾದ ಕಾರ್ಮಿಕನ‌ ಪತ್ತೆಗಾಗಿ ಶೋಧ ಕಾರ್ಯ ನಿನ್ನೆ ಸಂಜೆಯ ತನಕ ನಡೆಸಿರುತ್ತಾರೆ. ಕಾರ್ಮಿಕ ಬಿದ್ದಿರುವ ಸ್ಥಳದಿಂದ ಸುಮಾರು 2. ಕಿ.ಮೀ ನಷ್ಟು ದೂರದವರೆಗೆ ಹೊಳೆಯಲ್ಲಿ ಬೋಟ್ ಬಳಸಿ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಇದುವರೆಗೆ ನೀರಲ್ಲಿ ಬಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿಲ್ಲ.