ಭಾರೀ ಮಳೆ : ಗ್ಯಾಸ್ ಹಂಡೆಯಲ್ಲೂ ನೀರು!

0

ಗ್ರಾಹಕರಿಗೆ ಬಾರೀ ವಂಚನೆ



ಮುರೂರಿನ ಬಾಬು ನಾಯ್ಕರವರು ಸುಳ್ಯ ಇಂಡೇನ್ ಗ್ಯಾಸ್ ಏಜೆನ್ಸಿಯವರಿಂದ ರಿಫಿಲ್ ಮಾಡಿಸಿದ ಗ್ಯಾಸ್ ಹಂಡೆಯಲ್ಲಿ ಗ್ಯಾಸ್‌ನ ಬದಲು ನೀರು ತುಂಬಿರುವುದು ವರದಿಯಾಗಿದೆ.


ಬಾಬು ನಾಯ್ಕರವರು ಜೂ. 25 ರಂದು ಗ್ಯಾಸ್ ರಿಫೀಲ್ ಮಾಡಿಸಿದ್ದು, ಕಳೆದ ಒಂದು ವಾರದಿಂದ ಉಪಯೋಗಿಸುತ್ತಿದ್ದರು. ಜು. ೮ರಂದು ಅಡುಗೆ ಮಾಡುತ್ತಿದ್ದ ಸಂದರ್ಭ ಸ್ಟವ್ ಉರಿಯದೇ ಇರುವುದನ್ನು ಕಂಡು ಪರಿಶೀಲಿಸಿದಾಗ ಗ್ಯಾಸ್ ಖಾಲಿಯಾಗಿರಲಿಲ್ಲ. ಗ್ಯಾಸ್ ಹಂಡೆಯಲ್ಲಿ ಅರ್ಧಕ್ಕಿಂತ ಜಾಸ್ತಿ ನೀರೇ ತುಂಬಿದ್ದುದು ಈ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ.


ಇದೇ ರೀತಿ ಕೆಲವು ಸಲ ಸಂಭವಿಸುತ್ತಿದ್ದು, ಗ್ರಾಹಕರಿಗೆ ಗ್ಯಾಸ್ ವಿತರಿಸುವ ಸಂಸ್ಥೆಯವರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಗ್ರಾಹಕರಿಗೆ ಬಾರೀ ವಂಚನೆಯಾಗುತ್ತಿದೆ.