ಬೆಳ್ಳಾರೆ ಮತ್ತು ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನದೀಪ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ನವೋದಯ ಮತ್ತು ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷೆಯ ತರಗತಿಗಳು ಜು.8ರಿಂದ ಆರಂಭಗೊಂಡಿದೆ. ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 2024ರ ಜನವರಿ ತಿಂಗಳಲ್ಲಿ ನಡೆಯುವ ನವೋದಯ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ.
ಜ್ಞಾನದೀಪ ಸಂಸ್ಥೆಯು ಕಳೆದ 15 ವರ್ಷಗಳಿಂದ ನವೋದಯ ಪ್ರವೇಶ ಪರೀಕ್ಷೆಯ ತರಗತಿಗಳನ್ನು ನಡೆಸುತ್ತಿದೆ. ಈಗಾಗಲೇ ಇಲ್ಲಿ ತರಬೇತಿ ಪಡೆದ 160 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ಮೊರಾರ್ಜಿ ವಸತಿ ಶಾಲಾ ಪ್ರವೇಶ ಪರೀಕ್ಷೆಗೂ ಸಂಸ್ಥೆಯಲ್ಲಿ ತರಗತಿ ನಡೆಯುತ್ತಿದೆ. 2023-24ನೇ ಸಾಲಿಗೆ ಒಂದೇ ವರ್ಷದಲ್ಲಿ ಇಲ್ಲಿ ತರಬೇತಿ ಪಡೆದ 42 ವಿದ್ಯಾರ್ಥಿಗಳು ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದಾರೆ. ತರಗತಿ ಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.