ಬೆಳ್ಳಾರೆಯಲ್ಲಿ ಮೂಕಾಂಬಿಕಾ ಪ್ರಿವೆಂಟಿವ್ ಹೆಲ್ತ್ ಕೇರ್ ವೆಲ್ ನೆಸ್ ಸೆಂಟರ್ ಶುಭಾರಂಭ

0

ಬೆಳ್ಳಾರೆಯ ಕೆಳಗಿನ ಪೇಟೆಯ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ಸುದರ್ಶನ ಕೆ.ಎಸ್. ಮಾಲೀಕತ್ವದ ಮೂಕಾಂಬಿಕಾ ಪ್ರಿವೆಂಟಿವ್ ಹೆಲ್ತ್ ಕೇರ್ ವೆಲ್ ನೆಸ್ ಸೆಂಟರ್ ಜು. 10ರಂದು ಶುಭಾರಂಭಗೊಂಡಿತು. ಹಿರಿಯರಾದ
ಕೆ. ಶಂಕರನಾರಾಯಣ ಭಟ್ ಮತ್ತು ಶ್ರೀಮತಿ ಮೂಕಾಂಬಿಕಾ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಚೇರಿ ಸಿಬ್ಬಂದಿ ಇಎ ಸ್ಪೆಷಲಿಸ್ಟ್ ಹಿತಾ ರೈ, ಮಂಗಳೂರಿನ ಸಂಜೀವಿನಿ ಪ್ರಿವೆಂಟಿವ್ ಹೆಲ್ತ್ ಕೇರ್ ಎಕ್ಸ್ ಪೀರಿಯೆನ್ಸ್ ಸೆಂಟರ್ ನ ಮಾಲಕ ರವಿರಾಜ್ ನಾಯಕ್, ರಂಜಿತಾ ಸಿ.ಜೆ, ಪುತ್ತೂರು ವಿವೇಕಾನಂದ ಕಾಲೇಜಿನ ಅಶೋಕ್ ನಾಯಕ್, ಸಾಯಿಪ್ರಸಾದ್ ನೆಟ್ಟಾರು, ಅಶೋಕ್ ಶೆಟ್ಟಿ ಅರ್ಚನಾ, ವಿಶ್ವನಾಥ ರೈ, ವೆಂಕಟೇಶ್, ಶ್ರೀಮತಿ ಪ್ರವೀಣಾ ಪಿ ರೈ ಮರುವಂಜ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.