ಬಿಸಿಎಂ ಇಲಾಖೆ : ಶುಲ್ಕ ಮರುಪಾವತಿ ಸೌಲಭ್ಯಕ್ಕೆ ಆನ್ ಲೈನ್ ಮೂಲಕ ಅರ್ಜಿ

0

ಸುಳ್ಯ ತಾಲೂಕು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, 2022-23 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಶುಲ್ಕ ಮರುಪಾವತಿ” ಸೌಲಭ್ಯಕ್ಕೆ ಮಾತ್ರ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಕೊನೆಯ ದಿನಾಂಕವನ್ನು 28-05-2023 ನಿಗಧಿಪಡಿಸಲಾಗಿದ್ದು, ಸದರೀ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು : 15-07-2023 ರವರೆಗೆ 10 ದಿನಗಳ ಕಾಲ ವಿಸ್ತರಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ – 1 ರ ವಿದ್ಯಾರ್ಥಿಗಳಿಗೆ ರೂ.2.50 ಲಕ್ಷ, ಪ್ರವರ್ಗ ||ಎ, 2 ಬಿ, 3ಎ, 3 ಬಿ, ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ ಅರ್ಜಿಯನ್ನು : http.//ssp.postmatric.karnataka.gov.in/2122 ನಲ್ಲಿ ಸಲ್ಲಿಸಬೇಕು –

ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯವರ ಕಛೇರಿ ದೇವರಾಜ ಭವನ ಕೊಡಿಯಾಲ್ ಬೈಲ್ ಸುಳ್ಯ ಇವರನ್ನು ಸಂಪರ್ಕಿಸಬಹುದು
3008257-230659.