ಗುತ್ತಿಗಾರು : ಸ್ವಚ್ಚತೆಗೆ ಟಾಸ್ಕ್ ಫೋರ್ಸ್‌ ಇಂದು ಕಾರ್ಯಾಚರಣೆ

0

ಗುತ್ತಿಗಾರಿನ ಪೇಟೆ ಸ್ವಚ್ಛತೆಗಾಗಿ ಟಾಸ್ಕ್ ಫೋರ್ಸ್ ರಚನೆಯಾಗಿದ್ದು ಗ್ರಾ.ಪಂ, ಅಮರ ಸಂಜೀವಿನಿ ಸಂಘ ಹಾಗೂ ಎಲ್ಲಾ ಸಂಘ-ಸಂಸ್ಥೆಗಳು ಸೇರಿಕೊಂಡು ಗುತ್ತಿಗಾರನ್ನು ಸ್ವಚ್ಛವಾಗಿಡಲು ಸಂಕಲ್ಪದಂತೆ ಇಂದು ಗುತ್ತಿಗಾರು ಪೇಟೆಯಲ್ಲಿ ತೆರಳಿ ಸ್ವಚ್ಚತೆ ಬಗ್ಗೆ ಪರಿಶೀಲಿಸಲಾಯಿತು.

ಪ್ರತಿ ಗುರುವಾರ ಪೂರ್ವಾಹ್ನ 10.30 ಕ್ಕೆ ಟಾಸ್ಕ್ ಫೋರ್ಸ್ ಫೀಲ್ಡ್ ಮಾಡುತಿದ್ದು ಇಂದು ಸ್ವಚ್ಚಗಾಹಿಗಳಿದ್ದು ಕೆಲವೆಡೆ ಸ್ವಚ್ಚತೆಯನ್ನು ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಟಾಸ್ಕ್ ಫೋರ್ಸ್ ತಂಡ ರಚನೆಯಾಗಿದ್ದು ಗುತ್ತಿಗಾರಿನ ಸ್ವಚ್ಛತೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆಯೋ ಹಾಗೂ ಹೇಗೆ ಇರಬೇಕು ಎಂದು ತಿಳಿಸಲಾಗಿದೆ. ಇಂದು ಕೂಡ ಮೈಕಿನ ಮೂಲಕ ಅನೌನ್ಸ್ ಮಾಡಲಾಗಿದೆ. ಈ ಸಂದರ್ಭ ಗ್ರಾ.ಪಂ ಪಿಡಿಒ, ಉಪಸ್ಥಿತರಿದ್ದು, ಟಾಸ್ಕ್ ಫೋರ್ಸ್ ತನ್ನ ಕೆಲಸ ಮಾಡಿತು.