ದೊಡ್ಡತೋಟ- ಆರ್ನೋಜಿ ಸಂಪರ್ಕದ ರಸ್ತೆ ತೆರವು ಕಾರ್ಯ- ನ್ಯಾಯಾಲಯದ ಆದೇಶದ ಮೇರೆಗೆ ಬಗೆಹರಿದ ಸಮಸ್ಯೆ

0

ಅಮರಮುಡ್ನೂರು ಗ್ರಾಮದ ಆರ್ನೋಜಿ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯಾಜ್ಯದಲ್ಲಿ ಇದ್ದ ರಸ್ತೆಯ ಸಮಸ್ಯೆಯು ನ್ಯಾಯಾಲಯದ ಆದೇಶದ ಮೇರೆಗೆ ಇತ್ಯರ್ಥಗೊಂಡಿರುವುದಾಗಿ ತಿಳಿದು ಬಂದಿದೆ.
ದೊಡ್ಡತೋಟದಿಂದ ಆರ್ನೋಜಿ ಭಾಗದಲ್ಲಿ ಇರುವ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಯನ್ನು ಸ್ಥಳೀಯ
ಆರ್ನೋಜಿಯ ನಿವಾಸಿ ಶ್ರೀಮತಿ ಸರಸ್ವತಿ ಎಂಬವರು ಜಾಗದಲ್ಲಿ ಇರುವುದೆಂದು ರಸ್ತೆಯನ್ನು ಮುಚ್ಚಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ್ದರು. ಹಲವು ಬಾರಿ ಸ್ಥಳೀಯರ ಸಮ್ಮುಖದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೋರಿ ಸಂಧಾನದ ಮಾತುಕತೆ ನಡೆಸಿದರೂ ಫಲಕಾರಿಯಾಗಿರಲಿಲ್ಲ. ಇದರಿಂದಾಗಿ ಸ್ಥಳೀಯ ರಸ್ತೆ ಫಲಾನುಭವಿ ಗಣೇಶ್ ಆಲಿಯಾಸ್ ಆರ್ನೋಜಿ ಗಂಗಯ್ಯ ಗೌಡ ರವರು ಕೋರ್ಟ್ ಮೊರೆ ಹೋಗಿದ್ದರು.
ಇದೀಗ 14 ವರ್ಷಗಳ ಕಾಲ ನಡೆದ ವ್ಯಾಜ್ಯಕ್ಕೆ ಪರಿಹಾರ ಲಭಿಸಿದೆ. ನ್ಯಾಯಾಲಯದಿಂದ ರಸ್ತೆ ತೆರವು ಮಾಡುವಂತೆ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿದಿದೆ. ಬೆಳ್ಳಾರೆ ಪೋಲಿಸ್ ಠಾಣೆಯ ಅಧಿಕಾರಿಗಳು ಮತ್ತು

ಸುಳ್ಯ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರಾದ ಆರ್ನೋಜಿ ದಾಮೋದರ ಗೌಡ, ಎ.ಕೆ.ಹಿಮಕರ,ಎ.ಚಂದ್ರಶೇಖರ, ಶ್ರೀಮತಿ ಸುಶೀಲಾ, ಶ್ರೀಮತಿ ಪೂರ್ಣಿಮಾ ಕೇಶವ,ಶ್ರೀಮತಿ ಭಾರತಿಗಣೇಶ್, ಹರಿಪ್ರಸಾದ್,ಎ.ಸುಖೇಶ್, ಶ್ರೀಮತಿ ಸರಸ್ವತಿ ಯವರ ಸಮಕ್ಷಮದಲ್ಲಿ ರಸ್ತೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡುವ ಮೂಲಕ ಬಹಳ ವರ್ಷದ ಬೇಡಿಕೆ ಈಡೇರುವುದರೊಂದಿಗೆ ಸಮಸ್ಯೆಯು ಬಗೆ ಹರಿದಂತಾಗಿದೆ.