ಜೋಗಿಯಡ್ಕ ಬಳಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ-ಸ್ಥಳೀಯ ಯುವಕರಿಂದ ತೆರವು ಕಾರ್ಯ

0

ಅಮರಪಡ್ನೂರು ಗ್ರಾಮದ ಜೋಗಿಯಡ್ಕ ಬಳಿ ರಸ್ತೆಯ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ವಿಪರೀತ ಸುರಿದ ಗಾಳಿ ಮಳೆಗೆ ಮರ ವಿದ್ಯುತ್ ಲೈನಿನ ಮೇಲೆ ಬಿದ್ದಿದೆ. ವಿದ್ಯುತ್ ಲೈನ್ ರಸ್ತೆಯ ಮೇಲೆ ಬಿದ್ದಿದೆ. ಸ್ಥಳೀಯರಾದ ಹರೀಶ್ ಜೋಗಿಯಡ್ಕ, ರಾಧಾಕೃಷ್ಣ ಜೋಗಿಯಡ್ಕ, ಕಿರಣ್ ಜೋಗಿಯಡ್ಕ ರವರು ರಸ್ತೆಯ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟರು.