ಬಾಳಿಲ ಗ್ರಾಮ ಪಂಚಾಯತ್ ಗ್ರಾಮ ಸಭೆ

0

ರಸ್ತೆ, ವಿದ್ಯುತ್ ಕಂಬ ಬದಲಾವಣೆ ಬಗ್ಗೆ ಸುದೀರ್ಘ ಚರ್ಚೆ

ಬಾಳಿಲ ಗ್ರಾಮ ಪಂಚಾಯತ್ 2022-23 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಕೆ ಇವರ ಅಧ್ಯಕ್ಷತೆಯಲ್ಲಿ ಜು.20 ರಂದು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ರುದ್ರೆ ಗೌಡ ಪಾಟೀಲ್ ನೋಡೆಲ್ ಅಧಿಕಾರಿಯಾಗಿದ್ದರು.


ಪಿಡಿಒ ಹೂವಪ್ಪ ಗೌಡ ಸ್ವಾಗತಿಸಿ,ಕಾರ್ಯದರ್ಶಿ ಜಯಶೀಲ ರೈ ಬಿ.ವರದಿ ಮಂಡಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ಕೆ.,ಸದ್ಯಸ್ಯರಾದ ರವೀಂದ್ರ ರೈ ಟಪ್ಪಾಲುಕಟ್ಟೆ, ಶ್ರೀಮತಿ ಸುಶೀಲ ಕೆ.ಕಾಪಡ್ಕ, ಶ್ರೀಮತಿ ಪಾವನ ಜೋಗಿಬೆಟ್ಟು, ಜೆ.ಹರ್ಷ ಜೋಗಿಬೆಟ್ಟು, ರಮೇಶ್ ರೈ ಅಗಲ್ಪಾಡಿ, ಶ್ರೀಮತಿ ಸರಸ್ವತಿ ಕಾಮತ್, ತಾರನಾಥ ಕಾಂಚೋಡು ಉಪಸ್ಥಿತರಿದ್ದರು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.