ಸೀತಾರಾಮ ಗೌಡ ಪೆರ್ಮುಡ ನಿಧನ

0

ಕೇನ್ಯ ಗ್ರಾಮದ ಪೆರ್ಮುಡ ಸೀತಾರಾಮ ಗೌಡ ರವರು ಜು.20
ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ವೃತ್ತಿಯಲ್ಲಿ ಚಾಲಕನಾಗಿದ್ದು ,ಪಂಜ, ಬಳ್ಪ ಪರಿಸರದಲ್ಲಿ ಚಿರಪರಿಚಿತರು. ಅವರಿಗೆ 55 ವರುಷ ವಯಸ್ಸಾಗಿತ್ತು.


ಅವರಿಗೆ ಬಿಪಿ ಲೋ ಎಂದು ಮೊದಲು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಳಿಕೆ ವೈದ್ಯರ ಸಲಹೆ ಮೇರೆಗೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಆದರೆ ಮಂಗಳೂರಿನ ಆಸ್ಪತ್ರೆಗೆ ತಲುಪುವ ವೇಳೆಗೆ ಅವರು ಕೊನೆಯುಸಿರೆಳೆದರು.

ಮೃತರು ಪತ್ನಿ ಶ್ರೀಮತಿ ಭಾರತಿ, ಪುತ್ರಿ ದೀಪಶ್ರೀ, ಪುತ್ರ ದೀಕ್ಷಿತ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ