ನಕಲಿ ದಾಖಲೆ ಸೃಷ್ಠಿಸಿ ಸರಕಾರಿ ನೌಕರರ ಸಂಘದ ವಿರುದ್ಧ ಅಪಪ್ರಚಾರ

0

ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್‌ರಿಗೆ ಸುಳ್ಯ ತಾಲೂಕು ಘಟಕದಿಂದ ಮನವಿ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಕೆಲವರು ಸುಳ್ಳು ದಾಖಲೆ ಸೃಷ್ಠಿಸಿ ಸರಕಾರಿ ನೌಕರರ ಸಂಘದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದಲ್ಲದೆ, ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ತಾವು ಸತ್ಯವನ್ನು ಅರಿತು ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಳ್ಯ ತಾಲೂಕು ಸರಕಾರಿ ನೌಕರರ ಸಂಘ ಸುಳ್ಯ ತಹಶೀಲ್ದಾರಿಗೆ ಮನವಿ ಸಲ್ಲಿಸಿದೆ.

ಸರಕಾರಿ ನೌಕರರ ಸಂಘ ನೌಕರರ ಅಭ್ಯುಧಯಕ್ಕಾಗಿ ಹಗಲಿರುಳು ದುಡಿಯುತ್ತಿದೆ. ಸಂಘಟನೆಯ ರಾಜ್ಯಾದ್ಯಕ್ಷರು, ಜಿಲ್ಲೆ, ತಾಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳು ಹಾಗೂ ಜಿಲ್ಲೆ ಮತ್ತು ತಾಲೂಕು ಘಟಕಗಳ ಎಲ್ಲಾ ಹಂತದ ಪದಾಧಿಕಾರಿಗಳ ಮೇಲೆ ಅವ್ಯವಸ್ಥಿತ ವ್ಯವಸ್ಥಾಪನೆ ಮಾಡಿ, ನಕಲಿ ದಾಖಲೆ ಸೃಷ್ಠಿಸಿ ಸಂಘಕ್ಕೆ ಮಾನ ಹಾನಿ ಮಾಡಿರುವುದಲ್ಲದೆ, ಸಂಘಕ್ಕೆ ಆಡಳಿತಾಧಿಕಾರಿಗಳ ನೇಮಿಸುವಂತೆ ಸುಳ್ಳು ದೂರು ನೀಡುವ ಮೂಲಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತೇಜೋವಧೆ ಮಾಡಲಾಗುತ್ತಿದೆ. ಈ ರೀತಿ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸುಳ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ, ಪ್ರಮುಖರಾದ ಭವಾನಿ ಟೀಚರ್, ಸಿಂಗಾರ ಶೆಟ್ಟಿ, ಚಂದ್ರಕಾಂತ್ ಎಂ.ಆರ್., ಮಹಾದೇವ ಸ್ವಾಮಿ ಶಿವಪ್ರಸಾದ್ ಕಡವೆಪಳ್ಳ, ಕಿಶೋರ್ ಕುಮಾರ್, ಶಿವಪ್ರಸಾದ್ ಹುಳಿಯಡ್ಕ, ಯೋಗೀಶ್ ಭರತ್, ವಸಂತ್ ಮೊದಳಾದವರಿದ್ದರು.