ಸಂಪಾಜೆಯಲ್ಲಿ ವಿದ್ಯುತ್ ಲೈನ್ ದುರಸ್ತಿ ವೇಳೆ ಕಂಬ ಬುಡದಿಂದಲೇ ಕಿತ್ತುಬಿದ್ದು ಪವರ್ ಮ್ಯಾನ್ ಗೆ ಗಾಯ

0


ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಬುಡ ಸಹಿತ ಕಿತ್ತು ಬಿದ್ದು ಕಂಬದಲ್ಲಿ ಕೆಲಸ ಮಾಡುತ್ತಿದ್ದ ಪವರ್ ಮ್ಯಾನ್ ಗಾಯಗೊಂಡ ಘಟನೆ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ಇಂದು ನಡೆದಿದೆ.


ಗಾಳಿ ಮಳೆಗೆ ವಿದ್ಯುತ್ ಲೈನ್ ತುಂಡಾಗಿದ್ದು, ದುರಸ್ತಿ ಮಾಡಲು ಕಂಬ ಹತ್ತಿದ ಪವರ್ ಮ್ಯಾನ್ ಸಂಗಮೇಶ ಎಂಬವರು ಕೆಲಸ ಮಾಡುತ್ತಿದ್ದ ವೇಳೆ ಕಂಬ ಬುಡಸಮೇತ ಕಿತ್ತು ಬಿತ್ತೆನ್ನಲಾಗಿದೆ.

ಪರಿಣಾಮ ಸಂಗಮೇಶ ರವರ ಕೈ ಗೆ ಗಾಯವಾಗಿದ್ದು, ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆ ಗೆ ತಂದು ಚಿಕಿತ್ಸೆ ಕೊಡಿಸಲಾಗುತಿದೆ. ಅವರೊಂದಿಗೆ ಗ್ರಾ‌.ಪಂ.ಅಧ್ಯಕ್ಷ ಜಿ.ಕೆ.ಹಮೀದ್ ಆಸ್ಪತ್ರೆಯಲ್ಲಿದ್ದು ಸಹಕರಿಸುತ್ತಿದ್ದಾರೆ.