ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಇಂದ್ರಾಜೆ ಶಾಲೆಯಲ್ಲಿ ವನಮಹೋತ್ಸವ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಸ.ಕಿ. ಪ್ರಾ. ಶಾಲೆ ಇಂದ್ರಾಜೆಯಲ್ಲಿ ಜು.28 ರಂದು ವನಮಹೋತ್ಸವ ಕಾರ್ಯಕ್ರಮವು ನಡೆಯಿತು. ಮುಖ್ಯ ಅತಿಥಿಗಳಾಗಿ ಪಂಜ ವಲಯ ಅರಣ್ಯಾಧಿಕಾರಿಗಳಾದ ಗಿರೀಶ್ ಇವರು ಭಾಗವಹಿಸಿ ಹಣ್ಣಿನ ಗಿಡ ನೆಟ್ಟು, ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ವನ ಮಹೋತ್ಸವದ ಮಹತ್ವವನ್ನು ತಿಳಿಸಿದರು.


ರೋಟರಿ ಕ್ಲಬ್ ಅಧ್ಯಕ್ಷರಾದ ರೋ.ಶಶಿಧರ ಬಿ. ಕೆ, ರೊ| ಎ.ಕೆ.ಮಣಿಯಾಣಿ, ರೋ ರವೀಂದ್ರ ಗೌಡ,ರೋ ಪ್ರಮೋದ್ ಕೆ.ಕೆ.,ರೋ ಬಾಲಕೃಷ್ಣ ಮಡ್ತಿಲ ಭಾಗವಹಿಸಿದ್ದರು.
ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರು, ಸದಸ್ಯರು,ವಿದ್ಯಾರ್ಥಿಗಳ ಪೋಷಕರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.