ಗುತ್ತಿಗಾರು ಟಾಸ್ಕ್ ಫೋರ್ಸ್ ವತಿಯಿಂದ ಸ್ವಚ್ಛತಾ ಅಭಿಯಾನ

0

ಗುತ್ತಿಗಾರು ಟಾಸ್ಕ್ ಫೋರ್ಸ್ ವತಿಯಿಂದ ಸ್ವಚ್ಛತಾ ಅಭಿಯಾನಇಂದು ನಡೆಯಿತು. ಸ್ವಚ್ಚತೆಯೊಂದಿಗೆ ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ಸ್ವಯಂಪ್ರೇರಣೆಯಿಂದ ಎಲ್ಲರೂ ಸ್ವಚ್ಚತಾ ಟಾಸ್ಕ್ ಫೋರ್ಸ್‌ನೊಂದಿಗೆ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಪಂಚಾಯತ್ ಸದಸ್ಯರಾದ ವಿಜಯ ಚಾರ್ಮಾತ,ಶ್ರೀಮತಿ ಲತಾ ಆಜಡ್ಕ, ಅಮರ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಂಥಪಾಲಕರು, ವರ್ತಕರ ಸಂಘದ ಅಧ್ಯಕ್ಷರು ,ವರ್ತಕರು, ಜೀಪು ಚಾಲಕರು, ಆಟೋಚಾಲಕರು, ಟಾಸ್ಕ್ ಫೋರ್ಸ್ ನ ಸದಸ್ಯರೆಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಸ್ವಚ್ಚತೆ ಮಾಡುವುದರೊಂದಿಗೆ ಅರಿವು ಮೂಡಿಸಿದರು.


ಈ ಸಂದರ್ಭದಲ್ಲಿ ಮಾತೃಶ್ರೀ ಗಾರ್ಮೆಂಟ್ಸ್ ನ ಮಾಲಕ ಕೇಶವ ಕಣ್ಕಲ್ ಇವರು ಟಾಸ್ಕ್ ಫೋರ್ಸ್‌ನ ಸದಸ್ಯರಿಗೆ ಚಹಾದ ವ್ಯವಸ್ಥೆಯನ್ನು ಮಾಡಿದರು.