ದೊಡ್ಡೇರಿ ಶಾಲೆ ದುರಸ್ತಿಯಾಗದ ವಿಚಾರ : ಅಜ್ಜಾವರ ಗ್ರಾಮ ಸಭೆಯಲ್ಲಿ ಗದ್ದಲ

0

ಇಂಜಿನಿಯರಿಂಗ್ ಇಲಾಖೆಯವರ ಹಾಜರಾತಿಗೆ ಆಗ್ರಹ – ಸಭೆ ಮುಂದೂಡಿಕೆ

ಅಜ್ಜಾವರ ಗ್ರಾಮ ಪಂಚಾಯತಿ ಯ 2022-23 ನೇ ಸಾಲಿನ ಗ್ರಾಮ ಸಭೆಯು ಆ.8 ರಂದು‌ ಮೇನಾಲ ಅಂಬೇಡ್ಕರ್ ಭವನದಲ್ಲಿ ಆರಂಭಗೊಂಡಿತು.

ಪಂಚಾಯತ್ ಅಧ್ಯಕ್ಷೆ ಸತ್ಯವತಿ‌ ಬಸವನಪಾದೆಯವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು.

ಉಪಾಧ್ಯಕ್ಷೆ ಲೀಲಾ ಮನಮೋಹನ್, ಪಂಚಾಯತ್ ಸದಸ್ಯರು, ಇಲಾಖಾಧಿಕಾರಿಗಳು ಇದ್ದರು.

ಕ್ಷೇತ್ರ ಸಮನ್ವಯ ಅಧಿಕಾರಿ ಶೀತಲ್ ಯು.ಕೆ. ನೋಡೆಲ್ ಅಧಿಕಾರಿಯಾಗಿದ್ದರು.

ದೊಡ್ಡೇರಿ ಶಾಲೆ ದುರಸ್ತಿ ಯಾಗದಿರುವ ಕುರಿತು ಸಭೆಯಲ್ಲಿ ಗ್ರಾಮಸ್ಥರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.‌ಸಣ್ಣ ಮಕ್ಕಳ ವಿಚಾರ ಅಧಿಕಾರಿಗಳು, ಜನಪ್ರತಿನಿಧಿಗಳು ಯಾಕೆ ನಿರ್ಲಕ್ಷ್ಯ ‌ವಹಿಸುತ್ತೀರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇಂಜಿನಿಯರ್ ಇಲಾಖೆಯವರು ಸಭೆಗೆ ಬಾರದೆ ಸಭೆ ಬೇಡವೇ ಬೇಡ ಎಂದು ಗ್ರಾಮಸ್ಥರು ಆಗ್ರಹಿಸಿದರು.


ಗಂಗಾಧರ ಮೇನಾಲ, ಚಂದ್ರಶೇಖರ ಪಲ್ಲತಡ್ಕ, ಬಾಲಕೃಷ್ಣ ನಾಯ್ಕ್, ರಂಜಿತ್ ಮೇನಾಲ, ಹರ್ಷಿತ್ ದೊಡ್ಡೇರಿ, ಜಗದೀಶ್ ದೊಡ್ಡೇರಿ, ವಾಸುದೇ ನಾಯ್ಕ ಸಹಿತ ದೊಡ್ಡೇರಿ ಭಾಗದವರು ಈ ಚರ್ಚೆಯಲ್ಲಿ ಭಾಗವಹಿಸಿದರು.

ಅಮರಮುಡ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷ – ಉಪಾಧ್ಯಕ್ಷ ರ ಚುನಾವಣೆಗೆ ಇಂಜಿನಿಯರ್ ಮಣಿಕಂಠರು ನೋಡೇಲ್ ಆಗಿರುವುದರಿಂದ ಅವರು ಬರಲು ಸಾಧ್ಯ ಇಲ್ಲ ಎಂದು ನೋಡೇಲ್ ಅಧಿಕಾರಿಗಳು ಹೇಳಿದರು. ಕೆಲ ಹೊತ್ತು ಚರ್ಚೆ ನಡೆದು ಸಭೆ ಮುಂದೂಡಲಾಯಿತು.