ಮುರುಳ್ಯ ಗ್ರಾ.ಪಂ. : ಅಧ್ಯಕ್ಷತೆಗೆ ವನಿತಾ ಸುವರ್ಣ ನಾಮಪತ್ರ

0


ಉಪಾಧ್ಯಕ್ಷತೆಗೆ ಕು. ಜಾನಕಿ ಮುರುಳ್ಯ ನಾಮಪತ್ರ


ಅವಿರೋಧ ಆಯ್ಕೆ ಸಂಭವ


ಎಲ್ಲಾ ೭ ಮಂದಿ ಬಿಜೆಪಿ ಬೆಂಬಲಿಗ ಸದಸ್ಯರನ್ನು ಹೊಂದಿರುವ ನೂತನ ಗ್ರಾ.ಪಂ. ಮುರುಳ್ಯಕ್ಕೆ ಹಿ.ವ ಎ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನವೂ, ಪ.ಜಾತಿ ಮೀಸಲು ಕ್ಷೇತ್ರಕ್ಕೆ ಉಪಾಧ್ಯಕ್ಷ ಸ್ಥಾನವೂ ಲಭಿಸಿತ್ತು.


ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ವನಿತಾ ಸುವರ್ಣರು ಈ ಬಾರಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷತೆಗೆ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜಾನಕಿ ಮುರುಳ್ಯ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರೂ ಅವಿರೋಧ ಆಯ್ಕೆಯಾಗಲಿದ್ದಾರೆಂದು ತಿಳಿದು ಬಂದಿದೆ. ಚುನಾವಣಾ ಅಧಿಕಾರಿಯಾಗಿ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ಇದ್ದರು.