ಕಳಂಜ ಗ್ರಾ.ಪಂ ಅಧ್ಯಕ್ಷತೆಗೆ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷತೆಗೆ ಪ್ರೇಮಲತರಿಂದ ನಾಮಪತ್ರ

0

ಕಳಂಜ ಗ್ರಾ.ಪಂ.ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಬೇರಿಕೆ ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ ಬಾಲಕೃಷ್ಣ ಬೇರಿಕೆಯವರು ಅಧ್ಯಕ್ಷರಾಗಿಯೂ, ಉಪಾಧ್ಯಕ್ಷತೆ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿರುವುದರಿಂದ ಆ ಕ್ಷೇತ್ರದ ಏಕೈಕ ಸದಸ್ಯೆ ಶ್ರೀಮತಿ ಪ್ರೇಮಲತ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಪಂಚಾಯತ್ ನಲ್ಲಿ ಒಟ್ಟು 6 ಮಂದಿ ಸದಸ್ಯ ಬಲವನ್ನು ಹೊಂದಿದ್ದು, ಎಲ್ಲರೂ ಬಿಜೆಪಿ ಬೆಂಬಲಿತರಾಗಿದ್ದಾರೆ.